ಸಿದ್ದಾಪುರ: ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಗ್ರಾಮ ಒನ್ ಕೇಂದ್ರ ನಡೆಸುತ್ತಿದ್ದ ಸುರೇಶ ನಾಯ್ಕ ಸಾವನಪ್ಪಿದ್ದಾರೆ.
ಸಿದ್ದಾಪುರದ ಹಲಗೇರಿಯಲ್ಲಿ ಸುರೇಶ ನಾಯ್ಕ ಗ್ರಾಮ ಒನ್ ಕೇಂದ್ರ ನಡೆಸುತ್ತಿದ್ದರು. ಸಿದ್ದಾಪುರದಿಂದ ಹಲಗೇರಿ ಕಡೆಗೆ ಬೈಕ್ ಮೇಲೆ ಹೊರಟ ಅವರಿಗೆ ಜೋಗ ರಸ್ತೆಯ ಲಕ್ಷ್ಮೀನಗರದ ಬಳಿ ಕಾರು ಡಿಕ್ಕಿಯಾಯಿತು.
ಈ ಅಪಘಾತದಿಂದ ಸುರೇಶ ನಾಯ್ಕ ಗಂಭೀರ ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತು. ಆದರೆ, ದಾರಿಮದ್ಯೆಯೇ ಅವರು ಸಾವನಪ್ಪಿದರು.
ಸುರೇಶ ನಾಯ್ಕ ಉತ್ತಮ ಕ್ರೀಡಾಪಟುವಾಗಿದ್ದರು. ರಾಜ್ಯಮಟ್ಟದ ಕ್ರೀಡೆಗಳಲ್ಲಿ ಸಹ ಅವರು ಭಾಗವಹಿಸಿದ್ದರು. ಉತ್ತಮ ರೀತಿ ಗ್ರಾಮ ಒನ್ ಕೇಂದ್ರ ನಿರ್ವಹಿಸುತ್ತಿದ್ದರು.