ಹೊನ್ನಾವರ: ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಸುರೇಶ ಆಚಾರಿ ಗೇರು ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಕೆಲಸವಿಲ್ಲದೇ ನೊಂದುಕೊoಡಿದ್ದ ಅವರು ಕೆಲಸ ಕೇಳುವುದಕ್ಕಾಗಿ ಅಲೆದಾಡುತ್ತಿದ್ದರು. ನಂತರ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾದರು.
ಹೊನ್ನಾವರ ತಾಲೂಕಿನ ಮಂಕಿ ದೇವರಗದ್ದೆಯ ಸುರೇಶ ವೆಂಕಟ್ರಮಣ ಆಚಾರಿ (55) ಅವರಿಗೆ ಕಳೆದ ಆರು ತಿಂಗಳಿನಿoದ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ ಅವರ ಕುಟುಂಬ ಸಹ ಆರ್ಥಿಕ ಸಮಸ್ಯೆಗೆ ಒಳಗಾಗಿತ್ತು. ಇದನ್ನು ನೋಡಲಾಗದ ಅವರು ಡಿ 15ರ ಮಧ್ಯಾಹ್ನ ಈಶ್ವರ ಆಚಾರಿ ಅವರ ಮನೆಗೆ ಕೆಲಸ ಕೇಳಲು ಹೋಗುವುದಾಗಿ ಹೇಳಿ ಹೋಗಿದ್ದರು.
ಆದರೆ, ರಾತ್ರಿ ಕಳೆದರೂ ಸುರೇಶ ಆಚಾರಿ ಮನೆಗೆ ಮರಳಿಲ್ಲ. ಎಲ್ಲಡೆ ಅವರ ಹುಡುಕಾಟ ನಡೆಯಿತು. ಡಿ 16ರ ಸಂಜೆ ಅವರು ದೇವರಗದ್ದೆಯ ಶಾಂತಾ ಅವರ ಗೇರು ಹೆಕ್ಕಲಿನಲ್ಲಿರುವ ಮರಕ್ಕೆ ನೇತಾಡುತ್ತಿದ್ದರು. ಕೆಲಸ ಸಿಗದ ಬೇಸರ ಹಾಗೂ ಅನಾರೋಗ್ಯದ ಹಿನ್ನಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಸುರೇಶ ಅವರ ಪತ್ನಿ ಗಿರಿಜಾ ಆಚಾರಿ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.