ಮುಂಡಗೋಡ: ಅತ್ತೆ ಕೊಂದ ಅಳಿಯನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರೊಂದಿಗೆ 36 ಸಾವಿರ ರೂ ದಂಡ ಹಾಗೂ ಸಾವನಪ್ಪಿದವರ ಕುಟುಂಬಕ್ಕೆ 50 ಸಾವಿರ ರೂ ಪರಿಹಾರ ನೀಡುವಂತೆ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಬುದ್ದಿಮಾತು ಹೇಳಿದಕ್ಕೆ ಬಡಿಗೆಯಿಂದ ಹೊಡೆದ!
`ನನ್ನ ಮಗಳನ್ನು ಚನ್ನಾಗಿ ನೋಡಿಕೋ’ ಎಂದು ಸುರೇಶ ದಾದಾರಾವ ಸಿಂದೆ ಅವರ ಮಾವ ಹೇಳಿದ್ದರು. ಇದರಿಂದ ಸಿಟ್ಟಾದ ಸುರೇಶ ಮಾವನಿಗೆ ಬಡಿಗೆಯಿಂದ ಹೊಡೆಯಲು ಶುರು ಮಾಡಿದ್ದ. ಇದನ್ನು ತಪ್ಪಿಸಲು ಬಂದ ಅತ್ತೆಯನ್ನು ಆತ ಗುದ್ದಲಿಯ ಕಾವಿಗೆ ಬಳಸಿದ್ದ ಬಡಿಗೆಯಿಂದ ಬಡಿದು ಕೊಲೆ ಮಾಡಿದ್ದ.
2016ರ ಡಿಸೆಂಬರ್ 15ರಂದು ನಡೆದ ಕೊಲೆಯ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ಸುದೀರ್ಘ ವಿಚಾರಣೆ ನಡೆಯಿತು. ಪೊಲೀಸ್ ನಿರೀಕ್ಷಕ ಕಿರಣಕುಮಾರ ನಾಯಕ್ ಸಲ್ಲಿಸಿದ ದೋಷಾರೋಪಣ ಪಟ್ಟಿ, ಸರಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರ ವಾದ ಆಲಿಸಿದ ನ್ಯಾಯಾಧೀಶ ಕಿರಣ ಕಿಣಿ ತಮ್ಮ ಆದೇಶ ಪ್ರಕಟಿಸಿದರು.