`ಇಲ್ಲೇ ಹೋಗಿ ಬರುವೆ’ ಎಂದು ಹೊರಟ ಹನುಮಂತ ಗಣಾಚಾರಿ 18 ದಿನ ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ ಅವರ ಕುಟುಂಬದವರ ಆತಂಕ ಹೆಚ್ಚಿದ್ದು, ಎಲ್ಲಾ ಕಡೆ ಹುಡುಕಾಟ ಶುರು ಮಾಡಿದ್ದಾರೆ.
ಯಲ್ಲಾಪುರ ನೂತನ ನಗರದ ಹನುಮಂತ ಗಣಾಚಾರಿ ಫೆ 21ರಂದು ಮನೆಯಲ್ಲಿಯೇ ಇದ್ದರು. ಆ ದಿನ ರಾತ್ರಿ 11.45ಕ್ಕೆ `ಇಲ್ಲೆ ಹೊರಗೆ ಹೋಗಿ ಬರುವೆ’ ಎಂದು ಹೇಳಿ ಹೊರಟರು. ಆದರೆ, ಆ ರಾತ್ರಿ ಅವರು ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಲಿಲ್ಲ.
ಇಷ್ಟು ದಿನ ಕಳೆದರೂ ಹನುಮಂತ ಗಣಾಚಾರಿ ಮನೆಗೆ ಮರಳಲಿಲ್ಲ. ಸಂಬoಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರೂ ಸಿಗಲಿಲ್ಲ. ಹೀಗಾಗಿ ಹನುಮಂತ ಗಣಾಚಾರಿ ಕುಟುಂಬದವರು ಇದೀಗ ಅವರ ಫೋಟೋ ಹಿಡಿದು ಅಲೆದಾಡುತ್ತಿದ್ದಾರೆ.
ದುಂಡನೆ ಮುಖ, ಸಾಧರಣ ಮೈ ಕಟ್ಟು, 5.5 ಅಡಿ ಎತ್ತರವಿರುವ ಹಣುಮಂತ ಗಣಾಚಾರಿ ಮನೆಯಿಂದ ಹೊರ ಹೋಗುವಾಗ ಬಿಳಿ ಬಣ್ಣದ ಅಂಗಿ, ಬೂದು ಬಣ್ಣದ ಪ್ಯಾಂಟ್ ಧರಿಸಿದ್ದರು. ಅವರಿಗೆ ಕನ್ನಡದ ಜೊತೆ ಹಿಂದಿ ಭಾಷೆ ಸಹ ಮಾತನಾಡುತ್ತಾರೆ.
ಯಾರಾದರೂ ಅವರನ್ನು ಕಂಡರೆ ಪೊಲೀಸರಿಗೆ ಫೋನ್ ಮಾಡಿ. ಪೊಲೀಸರ ಫೋನ್ ನಂ: 9480805757 ಅಥವಾ 9480805273