ಕಸ್ತೂರಿ ರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಪ್ರದೇಶದ ಕರಡು ಅಧೀಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸೆ 30ಕ್ಕೆ ಅಂತಿಮ ಗುಡುವು ನೀಡಿದೆ. ಈ ಹಿನ್ನಲೆ ಸೆ 19ರಂದು ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಸಭೆ ನಡೆಯಲಿದೆ.
ಕರಡು ಕಸ್ತೂರಿ ರಂಗನ್ ವರದಿಯ ಜಾರಿಗೆ ಸಂಬoಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 10 ವರ್ಷದಿಂದ ವರದಿ ಅನುಷ್ಟಾನಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಜಿಲ್ಲಾ ಪಂಚಾಯತ, ವಿವಿಧ ತಾಲೂಕ ಪಂಚಾಯತ, ಗ್ರಾಮ ಪಂಚಾಯತಗಳಲ್ಲಿ ವರದಿಗೆ ವಿರೋಧವಾಗಿ ಠರಾವು ಸ್ವೀಕರಿಸಲಾಗಿದೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು 1 ಲಕ್ಷ ಕುಂಟುಬದಿoದ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಿದೆ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಹೇಳಿದ್ದಾರೆ. ವಿಧಾನ ಸಭೆ ಅಧಿವೇಶನದಲ್ಲಿಯೂ ವರದಿ ತಿರಸ್ಕರಿಸಲು ಸರ್ವಾನುಮತದಿಂದ ಪಕ್ಷಾತೀತವಾಗಿ ತೀರ್ಮಾನಿಸಿ, ರಾಜ್ಯ ಸರ್ಕಾರದ ವೃಜ್ಞಾನಿಕ ವರದಿಯೊಂದಿಗೆ ಕೇಂದ್ರ ಸರ್ಕಾರಕ್ಕೆ ವಿರೋಧ ಪ್ರಸ್ತವನೆ ಸಲ್ಲಿಸಬೇಕು ಎಂದು ಅವರು ಅಭಿಪ್ರಾಯ ಹಂಚಿಕೊoಡರು.
ಜಿಲ್ಲೆಯಲ್ಲಿನ 9 ತಾಲೂಕಗಳಲ್ಲಿ 604 ಹಳ್ಳಿಗಳು ಈ ವ್ಯಾಪ್ತಿಯಲ್ಲಿ ಬರುತಿದ್ದು, ಜಿಲ್ಲೆಯ ಸುಮಾರು 138 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಪ್ರದೇಶಗಳನ್ನು ಈ ಯೋಜನೆ ಅಡಿ ಗುರುತಿಸಲಾಗಿದೆ. ಜಿಲ್ಲೆಯ ಭೌಗೋಳಿಕವಾಗಿ ಶೇ.60 ರಷ್ಟು ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರ್ಪಡೆಗೊಳೂವುದರಿಂದ ಜಿಲ್ಲೆಯ ಸಂಪೂರ್ಣ ಜನಜೀವನದ ವ್ಯವ್ಯಸ್ಥೆ ಮತ್ತು ಮೂಲಭೂತಸೌಕರ್ಯಗಳ ಮೇಲೆ ತೀವ್ರ ತರದ ಪರಿಣಾಮ ಬೀರಲಿದೆ.