ಮದುವೆಗೆ ಹೋಗಬೇಕಿದ್ದ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ. ಆ ಮಹಿಳೆ ಜೊತೆ ಇಬ್ಬರು ಮಕ್ಕಳು ಕಾಣಿಸುತ್ತಿಲ್ಲ. ಶಿರಸಿ ಪೊಲೀಸರು ಮಹಿಳೆ ಹಾಗೂ ಮಕ್ಕಳ ಹುಡುಕಾಟ ನಡೆಸಿದ್ದಾರೆ.
ಶಿರಸಿ ಗಣೇಶನಗರದ ಮಾರುತಿಗಲ್ಲಿಯಲ್ಲಿ ಜ್ಯೋತಿ ಭೋವಿವಡ್ಡರ್ (32) ಅವರು ತಮ್ಮ ಕುಟುಂಬದ ಜೊತೆ ವಾಸವಾಗಿದ್ದರು. ಸಂಬAಧಿಕರ ಮದುವೆಗಾಗಿ ಅವರು ಸಿದ್ಧತೆ ಮಾಡಿಕೊಂಡಿದ್ದು, ಏಪ್ರಿಲ್ 17ರಂದು ಇಬ್ಬರು ಮಕ್ಕಳ ಜೊತೆ ಮನೆ ಬಿಟ್ಟಿದ್ದರು. `ಮಳಗಿಗೆ ಹೋಗಿ ಬರುವೆ’ ಎಂದು ಪತಿ ಹನುಮಂತ ಭೋವಿವಡ್ಡರ್ ಅವರ ಬಳಿ ಹೇಳಿದ್ದರು.
ಆದರೆ, ಜ್ಯೋತಿ ಅವರು ಮದುವೆ ಮನೆಗೆ ತಲುಪಿಲ್ಲ. 13ವರ್ಷದ ಮಗ ಹಾಗೂ 10 ವರ್ಷದ ಮಗಳ ಜೊತೆ ಹೊರಟ ಅವರು ಎಲ್ಲಿ ಹೋದರು? ಎಂದು ಗೊತ್ತಾಗಲಿಲ್ಲ. ದಿನ ಕಳೆದರೂ ಅವರು ಮನೆಗೆ ಮರಳಿ ಬರಲಿಲ್ಲ. ಹೀಗಾಗಿ ಹನುಮಂತ ಭೋವಿವಡ್ಡರ್ ಅವರು ಎಲ್ಲಾ ಕಡೆ ಹುಡುಕಿದರು. ಆದರೆ, ಯಾವುದೇ ಸುಳಿವು ಸಿಗಲಿಲ್ಲ.
ಪತ್ನಿ ಹಾಗೂ ಇಬ್ಬರು ಮಕ್ಕಳು ಕಾಣೆಯಾಗಿರುವ ಬಗ್ಗೆ ಹನುಮಂತ ಭೋವಿವಡ್ಡರ್ ಅವರು ಪೊಲೀಸರ ಮೊರೆ ಹೋದರು. ಪೊಲೀಸರು ಸಹ ಆ ಮೂವರ ಹುಡುಕಾಟ ನಡೆಸಿದ್ದಾರೆ. ಜ್ಯೋತಿ ಹಾಗೂ ಅವರ ಇಬ್ಬರು ಮಕ್ಕಳು ಕಾಣಿಸಿದರೆ ಇಲ್ಲಿ ಫೋನ್ ಮಾಡಿ: 9480805264