ಬಾಲ್ಯದಿಂದಲೂ ಯಕ್ಷಗಾನದಲ್ಲಿ ಅಪಾರ ಆಸಕ್ತಿ ಹೊಂದಿದ ಜನಾರ್ಧನ ಹೆಗಡೆ ಹಾಡಿಕೈ ಅವರು ಮೂರು ದಶಕಗಳ ಕಾಲ ಮದ್ದಲೆ ವಾದಕರಾಗಿ ಕಲಾ ಸೇವೆ ಮಾಡಿದ್ದಾರೆ.
1953ರಲ್ಲಿ ಜನಿಸಿದ ಅವರು ಓದಿದ್ದು ಐದನೇ ತರಗತಿ. ಸಾಗರದವರಾದ ಅವರು ಮುಂದೆ ಯಕ್ಷ ಕಲಿಕೆಗಾಗಿ ಕೋಟ ಕೇಂದ್ರ ಸೇರಿದರು. ಅಲ್ಲಿ ನಿರಂತರ ಅಭ್ಯಾಸದ ಮೂಲಕ ತಮ್ಮ ಬಾಲ್ಯದ ಬಯಕೆಯಂತೆ ಮದ್ದಲೆ ವಾದಕರಾಗಿ ತರಬೇತಿ ಪಡೆದರು. ದಿ.ನಾರ್ಣಪ್ಪ ಉಪ್ಪೂರು, ದಿ.ತಿಮ್ಮಪ್ಪ ನಾಯ್ಕರು ಜನಾರ್ಧನ ಹೆಗಡೆ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಅಭ್ಯಾಸ ಮಾಡಿಸಿದರು. ಎರಡು ವರ್ಷಗಳ ಕಾಲ ಮದ್ದಲೆವಾದನದ ಅಭ್ಯಾಸ ಮಾಡಿದ ಅವರು ಕಲಿಕೆ ಅವಧಿಯಲ್ಲಿಯೇ ವೇದಿಕೆ ಪ್ರದರ್ಶನ ನೀಡಿದರು.
ಕಲಿಕೆ ಅವಧಿಯಲ್ಲಿ ಶಂಕರ ಭಾಗವತರು, ಸುಬ್ರಾಯ ಭಂಡಾರಿ, ಗಜಾನನ ಭಂಡಾರಿ, ತ್ಯಾಗಲಿ ರಾಧಾಕೃಷ್ಣ ಭಟ್ಟ ಮುಂತಾದವರು ಹಾಡಿಕೈ ಅವರ ಸಹಪಾಠಿಗಳಾಗಿದ್ದರು. ಕಲಿಕೆಯ ನಂತರ ಅಮೃತೇಶ್ವರಿ ಮೇಳದ ಮೂಲಕ ರಂಗ ಪ್ರವೇಶ ಮಾಡಿದರು. ಒಂದು ವರ್ಷಗಳ ಕಾಲ ಮೇಳಗಳ ತಿರುಗಾಟ ಮಾಡಿದರು. ನಂತರ ಪೆರ್ಡೂರು ಮೇಳದಲ್ಲಿ ಎರಡು ವರ್ಷ, ಹಿರಿಯಡಕ ಹಾಗೂ ಇಡಗುಂಜಿ ಟೆಂಟ್ ಮೇಳದಲ್ಲಿ ಒಂದೊoದು ವರ್ಷ ಊರುರು ಸುತ್ತಿದರು. ಎಲ್ಲಾ ವೇದಿಕೆಯಲ್ಲಿಯೂ ಅವರ ಪ್ರದರ್ಶನ ಅದ್ಭುತ!
ಸಿರಿವಂತೆಯಲ್ಲಿ ಟಿ.ವಿ.ಶಿವರಾಮಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕೂಟಗಳಲ್ಲಿ ಜನಾರ್ಧನ ಹೆಗಡೆ ಅವರು ಹೆಚ್ಚಿಗೆ ಭಾಗವಹಿಸಿದ್ದಾರೆ. ಸಾಗರ ಭಾಗದಲ್ಲಿ ಅನೇಕ ಸಂಘ-ಸ0ಸ್ಥೆಗಳಿoದ ನಡೆಯುತ್ತಿದ್ದ ಕಲಾ ಪ್ರದರ್ಶನಗಳಿಗೂ ಹಾಜರಿ ಹಾಕಿದ್ದಾರೆ. ಈಚಲಕೊಪ್ಪ ಪ್ರಭಾಕರ ಭಾಗ್ವತ, ಕೆ.ವಿ ಹೆಗಡೆ, ಕೆ ಜಿ ರಾಮರಾವ್, ಗುಂಡುಮನೆ ನರಸಿಂಹಯ್ಯ, ಕೆಶಿನಮನೆ ಸುಬ್ರಾಯರು, ಗುಡ್ಡೆಹಿತ್ತಲು ಸುಬ್ರಹ್ಮಣ್ಯ ಭಟ್ಟ, ಶ್ರೀನಿವಾಸರಾವ್, ನಿಟ್ಟೂರು ಅನಂತ ಹೆಗಡೆ ಮುಂತಾದ ಕಲಾವಿದರು ಹೆಗಡೆಯವರ ಒಡನಾಡಿಗಳಾಗಿದ್ದರು. ಅವರ ಮೂಲಕವೇ ಕಲೆಯಲ್ಲಿ ಬೆಳೆಯಲು ಪ್ರೋತ್ಸಾಹ ಸಿಕ್ಕಿದೆ ಎಂದವರು ಸ್ಮರಿಸುತ್ತಾರೆ.
ಕರ್ನಾಟಕ ಕಲಾ ಸನ್ನಿಧಿ, ತೆಲಂಗಾರ