ಧಾರವಾಡ ಜಿಲ್ಲೆಯ ದೇವಿಕೊಪ್ಪ ಅರಣ್ಯದ ಕೊನೆ ಗ್ರಾಮ ತಂಬೂರ ಜಾತ್ರೆಗೆ ಸಂಪ್ರದಾಯದ0ತೆ ಯಲ್ಲಾಪುರದಿಂದಲೂ ಚಕ್ಕಡಿ ಗಾಡಿಗಳು ತೆರಳುತ್ತಿವೆ. ಸೋಮವಾರ ಆರು ಚಕ್ಕಡಿ ಗಾಡಿಗಳು ಕಿರವತ್ತಿ ಮಾರ್ಗವಾಗಿ ತಂಬೂರಿಗೆ ಚಲಿಸಿದವು.
ತಂಬೂರಿನ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಜನ ಬರುತ್ತಾರೆ. ಹೆಚ್ಚಿನ ಸಂಖ್ಯೆಯ ರೈತರು ಚಕ್ಕಡಿ ಗಾಡಿಗಳ ಮೂಲಕ ತೆರಳುತ್ತಾರೆ. ಕಿರವತ್ತಿ ಗಡಿಭಾಗದಿಂದ ಭಾಗದಿಂದ 10ಕಿಮೀ ದೂರ ಚಲಿಸಿದರೆ ತಂಬೂರು ಸಿಗುತ್ತದೆ. ಹೀಗಾಗಿ ಅಲ್ಲಿನ ಜಾತ್ರೆಗೆ ಇಲ್ಲಿನ ಜನರು ಅತ್ಯಂತ ಭಕ್ತಿಯಿಂದ ನಡೆದುಕೊಳ್ಳುತ್ತಾರೆ.
ತಂಬೂರಿನಲ್ಲಿ ಇತಿಹಾಸ ಪ್ರಸಿದ್ಧ ಬಸವಣ್ಣನ ಜಾತ್ರೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಸಾವಿರಾರು ಜನ ಆಗಮಿಸಿ ತೇರಿಗೆ ನಮಿಸುತ್ತಿದ್ದಾರೆ. ಸೋಮವಾರ ತಂಬೂರ ಜಾತ್ರೆಗೆ ಹೊಸಳ್ಳಿ ರೈತ ಬಾಂಧವರು ಚಕ್ಕಡಿ ಮೂಲಕ ತೆರೆಳಿದರು. ಹಳೆಯ ಸಂಪ್ರದಾಯವನ್ನು ಆ ಭಾಗದ ಜನ ಉಳಿಸುವ ಪ್ರಯತ್ನ ನಡೆಸಿದರು.
ಈ ಹಿಂದೆ ಹೊಸಳ್ಳಿಯಿಂದ ಐವತ್ತಕ್ಕೂ ಹೆಚ್ಚು ಚಕ್ಕಡಿ ಬಂಡಿಗಳು ಜಾತ್ರೆಗೆ ತೆರಳುತ್ತಿದ್ದವು. ಕ್ರಮೇಣ ಚಕ್ಕಡಿ ಗಾಡಿ ಸಂಖ್ಯೆ ಇಳಿಮುಖವಾಗಿದ್ದು, ಈ ವರ್ಷ ಹೊಸಳ್ಳಿ ಭಕ್ತರಾದ ಪಾಂಡು ಪಟಕಾರೆ, ಅಬ್ಬು ಡೊಯಿಪೋಡೆ, ಜಾನು ಪಾಂಡು ಪಟಕಾರೆ, ರಾಮು ಬಾಗು ಜಾನಕರ ಹಾಗೂ ಇತರರು ಹಳೆಯ ಸಂಪ್ರದಾಯದ ಪ್ರಕಾರ ಚಕ್ಕಡಿ ಮೂಲಕ ತೆರಳಿದರು.