ನಾಡಿನ ಶಕ್ತಿ ದೇವತೆಗಳಲ್ಲಿ ಒಂದಾದ ಯಲ್ಲಾಪುರ ಗ್ರಾಮದೇವಿಯರಿಗೆ ಶುಕ್ರವಾರ ಸ್ವರ್ಣ ಕಿರೀಟ ಸಮರ್ಪಣೆಯಾಗಿದೆ.
ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಾಲಯ ಆಡಳಿತ ಮಂಡಳಿಯವರು ದೇವಿಯರಿಗೆ ಕಿರೀಟ ತೊಡಿಸಿದರು. ಈ ವೇಳೆ ದೇಗುಲ ಆವರದಲ್ಲಿ ನೆರೆದಿದ್ದ ಭಕ್ತರು ಭಕ್ತಿ-ಭಾವ ಮೆರೆದರು. ಸ್ವರ್ಣ ಕಿರೀಟದಿಂದ ಅಲಂಕೃತಗೊoಡ ದೇವಿಯರನ್ನು ಜನ ಕಣ್ತುಂಬಿಕೊoಡರು
ಪ್ರತಿ ವರ್ಷ ಆಯೋಜಿಸುವ ವಾರ್ಷಿಕ ಕಾರ್ಯಕ್ರಮಕ್ಕೆ ಸಹ ಈ ದಿನ ಚಾಲನೆ ದೊರೆಯಿತು. ಹಲವು ವೈದಿಕರು ಆಗಮಿಸಿ ಬಗೆ ಬಗೆಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಸಹ ನಡೆದಿದ್ದು, ಭಕ್ತರು ಪ್ರಸಾದ ಬೋಜನ ಸ್ವೀಕರಿಸಿದರು.