ಯಲ್ಲಾಪುರ: ಹಿಲ್ಲೂರಿನ ನಾರಾಯಣ ಭಟ್ಟ (55) ಎಂಬಾತರ ಕಾರಿಗೆ ಕಾರವಾರ ಹಳಗಾದ ವಿನಾಯಕ ಮೋಗೇಕರ್ (36) ಎಂಬಾತ ಆರತಿಬೈಲ್ ಘಟ್ಟದಲ್ಲಿ ತನ್ನ ಕಾರು ಗುದ್ದಿದ್ದು, ಇದರಿಂದ ನಾರಾಯಣ ಭಟ್ಟ ಹಾಗೂ ಕಮಲಾಕ್ಷಿ ಭಟ್ಟ ಎಂಬಾತರಿಗೆ ಗಾಯವಾಗಿದೆ.
ಜುಲೈ 11ರಂದು ಸಂಜೆ ನಾರಾಯಣ ಭಟ್ಟ ಅವರು ಸಹೋದರನ ಪತ್ನಿ ಕಮಲಾಕ್ಷಿ ಭಟ್ಟ ಅವರ ಜೊತೆ ಯಲ್ಲಾಪುರದಿಂದ ಅಂಕೋಲಾ ಕಡೆ ಹೊರಟಿದ್ದರು. ಅಂಕೋಲಾ ಕಡೆಯಿಂದ ಜೋರಾಗಿ ಕಾರು ಓಡಿಸಿಕೊಂಡು ಬಂದ ವಿನಾಯಕ ಮೋಗೆಕರ್ ಆರತಿಬೈಲ್ ಘಟ್ಟದಲ್ಲಿ ಏಕಾಏಕಿ ಕಾರನ್ನು ಬಲಭಾಗಕ್ಕೆ ತಿರುಗಿಸಿದ್ದು, ಈ ವೇಳೆ ಅಲ್ಲಿ ಸಂಚರಿಸುತ್ತಿದ್ದ ಕಾರಿಗೆ ಗುದ್ದಿದ್ದಾನೆ. ಇದರಿಂದ ಗಾಯಗೊಂಡ ನಾರಾಯಣ ಭಟ್ಟ ಹಾಗೂ ಕಮಲಾಕ್ಷಿ ಭಟ್ಟ ಮೂರು ದಿನಗಳ ಕಾಲ ಚೇತರಿಸಿಕೊಂಡು, ಇದೀಗ ಆತನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.
Discussion about this post