ಶಿರಸಿ – ಯಲ್ಲಾಪುರ ನಡುವಿನ ಮoಚಿಕೇರಿ ಬಳಿಯ ಯಡಳ್ಳಿಯಲ್ಲಿ 1969ರಲ್ಲಿ ಎಳೆದ ವಿದ್ಯುತ್ ತಂತಿಗಳ ಮೂಲಕವೇ ಈಗಲೂ ವಿದ್ಯುತ್ ಸರಬರಾಜು ನಡೆಯುತ್ತಿದೆ. ವಿದ್ಯುತ್ ತಂತಿ ಶಿಥಿಲಗೊಂಡಿದ್ದರೂ ಅದನ್ನು ಬದಲಿಸುವ ಕರ್ಯ ನಡೆದಿಲ್ಲ. ಹೀಗಾಗಿ ಪದೇ ಪದೇ ವಿದ್ಯುತ್ ತಂತಿ ತುಂಡಾಗುತ್ತಿದ್ದು, ಅನಾಹುತಗಳು ಮುಂದುವರೆದಿದೆ.
ಬುಧವಾರ ರಾಜು ಸಿದ್ದಿ ಎಂಬಾತರ ಜಾನುವಾರು ತುಂಡಾಗಿಬಿದ್ದ ವಿದ್ಯುತ್ ತಂತಿ ತುಳಿದು ಸಾವನಪ್ಪಿದೆ. ಜಾನುವಾರು ಹುಡುಕುತ್ತ ಸಾಗಿದ ರಾಜು ಸಿದ್ದಿ ಸಹ ಕೂದಲೆಳೆಯ ಅಂತರದಲ್ಲಿ ವಿದ್ಯುತ್ ಆಘಾತದಿಂದ ಬಚಾವಾಗಿದ್ದಾರೆ. ಈ ಭಾಗದಲ್ಲಿ ಹೊಸ ತಂತಿ ಎಳೆಯಬೇಕು ಎಂಬುದು ಹಲವರ ಆಗ್ರಹ
ಈ ಬಗ್ಗೆ ಹಾಸಣಗಿ ಗ್ರಾಮ ಪಂಚಾಯತ ಸದಸ್ಯ ಎಂ ಕೆ ಭಟ್ಟ ಯಡಳ್ಳಿ ವಿವರಿಸಿದ ವಿಡಿಯೋ ಇಲ್ಲಿ ನೋಡಿ..
Discussion about this post