6

ಬಾಡಿಗೆ ಮನೆಯಲ್ಲಿ ಕೋಟಿ ಕೋಟಿ ಕಾಸು: ಆದರೆ, ಅದೆಲ್ಲವೂ ನಕಲಿ!

ದಾಂಡೇಲಿಯ ಗಾಂಧೀನಗರದಲ್ಲಿನ ಬಾಡಿಗೆ ಮನೆಯಲ್ಲಿ ಕೋಟಿ ಕೋಟಿ ಲೆಕ್ಕಾಚಾರದಲ್ಲಿ ನಕಲಿ ನೋಟು ಸಿಕ್ಕಿದೆ. ನೋಟಿನ ಮೇಲೆ `ರಿವರ್ಸ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬರೆಯಲಾಗಿದ್ದು, ಸಿನಿಮಾ ಚಿತ್ರಿಕರಣಕ್ಕೆ ಬಳಸುವ ನೋಟು ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇಲ್ಲಿನ ನೂರಜಾನ್ ಜುಂಜವಾಡ್ಕರ್ ಎಂಬಾತರು ಗೋವಾದಲ್ಲಿ ವಾಸವಾಗಿರುವ ಅರ್ಷದ್ ಖಾನ್ ಎಂಬಾತರಿಗೆ ಮನೆ ಬಾಡಿಗೆ ನೀಡಿದ್ದರು. ಆದರೆ, ಒಂದು ತಿಂಗಳಿನಿAದ ಆ ಮನೆಯಲ್ಲಿ ಯಾರೂ ವಾಸವಾಗಿರಲಿಲ್ಲ. ಮನೆ ಚಿಲಕ ಸಹ ಸರಿಯಾಗಿ ಹಾಕಿರಲಿಲ್ಲ. ದಾಂಡೇಲಿ ನಗರ ಠಾಣೆ ಪೊಲೀಸರು ಬಾಡಿಗೆ ಮನೆಯೊಳಗೆ ನುಗ್ಗಿ ಪರಿಶೀಲನೆ ನಡೆಸಿದರು.

ಆಗ, 500ರೂ ಮುಖಬಲೆಯ 14 ಕೋಟಿ ರೂಪಾಯಿಯಷ್ಟು ನೋಟುಗಳು ಸಿಕ್ಕಿದವು. ಎಲ್ಲಾ ನೋಟುಗಳ ಮೇಲೆ `0000′ ಎಂದು ಬರೆಯಲಾಗಿತ್ತು. ಗವರ್ನರ್ ಸಹಿ ಇರಲಿಲ್ಲ. `ಮೂವಿ ಶೂಟಿಂಗ್ ಪರ್ಪಸ್ ಓನ್ಲಿ’ ಎಂದು ಸಹ ನೋಟಿನ ಮೇಲೆ ನಮೂದಿಸಲಾಗಿತ್ತು. ಈ ಪ್ರಮಾಣದಲ್ಲಿ ನೋಟು ಸಿಕ್ಕಿದ ಕಾರಣ ಜನ ಅಚ್ಚರಿವ್ಯಕ್ತಪಡಿಸಿದರು. ಅದಾದ ನಂತರ ನೋಟುಗಳು ನಕಲಿ ಎಂದು ಅರಿವಾಗಿ ಇನ್ನಷ್ಟು ಆತಂಕ್ಕೆ ಒಳಗಾದರು. ಸಿನಿಮಾ ಚಿತ್ರಿಕರಣಕ್ಕೆ ಬಳಸುವ ನೋಟು ಎಂದು ಅರಿತು ನಿರಾಳರಾದರು.

ಅದಾಗಿಯೂ ಪೊಲೀಸರು ನೈಜ ವಿಷಯದ ಹುಟುಕಾಟ ನಡೆಸಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವ್ಯಕ್ತಿಯ ವಿಚಾರಣೆಗೆ ಮುಂದಾಗಿದ್ದಾರೆ.

 

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page