ಅಂಕೋಲಾ ತಾಲೂಕಿನ ಬೆಳಸೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಈ ವಸತಿ ಶಾಲೆ ಶೇ 95.12ರ ಫಲಿತಾಂಶ ದಾಖಲಿಸಿದೆ.
ಮಾರ್ಚ – ಏಪ್ರಿಲ್ ತಿಂಗಳಿನಲ್ಲಿ ನಡೆದ ಪರೀಕ್ಷೆಗಾಗಿ ಮಕ್ಕಳು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲಿನ ಶಿಕ್ಷಕರು ಮಕ್ಕಳ ಸಾಧನೆಗೆ ಪ್ರೇರಣೆಯಾಗಿದ್ದರು. ಅದರ ಪರಿಣಾಮವಾಗಿ ಈ ಸಾಧನೆ ಸಾಧ್ಯವಾಗಿದೆ.
ಹಿಂದಿ ವಿಷಯದಲ್ಲಿ ನಾಲ್ಕು ವಿದ್ಯಾರ್ಥಿಗಳು 100 ಅಂಕ ಪಡೆದಿದ್ದಾರೆ. ಸಿಂಚನಾ ಸಂದೀಪ್ ನಾಯ್ಕ ಅವರು ಶೇ 95.2 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಅನುಷಾ ಅರುಣ್ ನಾಯ್ಕ ಅವರು ಶೇ 93.44 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಶಮಾ ವೆಂಕಟ್ರಮಣ ಮೂಡಂಗಿ ಶೇ 91.68 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
ಶಾಲೆಯ ಗುಣಾತ್ಮಕ ಫಲಿತಾಂಶ ಶೇ 83.61ರಷ್ಟಾಗಿದೆ. ಮಕ್ಕಳ ಸಾಧನೆ ಗಮನಿಸಿದ ಉತ್ತರ ಕನ್ನಡ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಮೇಶ್ ಕೆ ವೈ, ಪ್ರಾಚಾರ್ಯ ಅಶೋಕ ಗಾಂವಕರ್, ಶಾಲೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ಪಾಲಕರು ಮೆಚ್ಚುಗೆವ್ಯಕ್ತಪಡಿಸಿದ್ದಾರೆ.






