6

ಸಪ್ತಪದಿ ಸಡಗರಕ್ಕೆ ಸಾಕ್ಷಿಯಾದ ಶ್ರೀಕ್ಷೇತ್ರದ ಸಮುದ್ರ: ವಿದೇಶಿ ಬೆಡಗಿಗೆ ಕರಗಿದ ಹಿಮಾಲಯದ ಹುಡುಗನ ಮನಸ್ಸು!

ಗೋಕರ್ಣ ಮುಖ್ಯ ಕಡಲತೀರದ ರಾಮಾ-ಸೀತಾ-ಲಕ್ಷ್ಮಣ ಮಂದಿರದಲ್ಲಿ ವಿದೇಶಿ ಬೆಡಗಿ ಹಾಗೂ ಹಿಮಾಚಲ ಪ್ರದೇಶ ಹುಡುಗ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದಾರೆ. ಜಾತಿ, ಧರ್ಮ, ಪ್ರದೇಶದ ಹಂಗಿಲ್ಲದೇ ಅವರಿಬ್ಬರು ಕೂಡಿ ಬಾಳುವ ಶಪಥ ಮಾಡಿದ್ದಾರೆ.

ಹಿಮಾಚಲ ಪ್ರದೇಶದ ಸಂಜಾತ ಅವರು ಇಲ್ಲಿನ ರೆಸಾರ್ಟವೊಂದರಲ್ಲಿ ನೌಕರಿ ಮಾಡುತ್ತಾರೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಕ್ಲಾರಿಷ್ ರಿಚ್ ಅವರು ಸಂಜಾತನನ್ನು ಹುಡುಕಿಕೊಂಡು ಫ್ರೇಂಚ್ ದೇಶದಿಂದ ಭಾರತಕ್ಕೆ ಬರುತ್ತಾರೆ. ಆತನ ಮೋಹದಲ್ಲಿ ಬಿದ್ದು, ಪ್ರೀತಿಯನ್ನು ಮನ್ನಿಸಿ ಅವರಿಬ್ಬರು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ.

`ಭಾರತೀಯ ಸಂಸ್ಕೃತಿ ಪ್ರಕಾರ ಮದುವೆ ಆಗೋಣ’ ಎಂದು ಸಂಜಾತ ಹೇಳಿದಾಗ ಇಲ್ಲಿನ ಆಚಾರ-ವಿಚಾರಗಳ ಬಗ್ಗೆ ಅರಿತ ಕ್ಲಾರಿಷ್ ರಿಚ್ ಅದನ್ನು ಗೌರವಿಸಿ ಸಮ್ಮತಿ ನೀಡಿದ್ದಾರೆ. ಅದರ ಪ್ರಕಾರ ಮಂದಿರದ ಅರ್ಚಕ ಪ್ರಕಾಶ ಅಂಬೇಕರ ಹಾಗೂ ಸತ್ಯಾನಂದ ಅಂಬೇಕರ ಅವರಿಬ್ಬರಿಗೂ ವಿವಾಹ ಮಾಡಿಸಿದ್ದಾರೆ.

  • Related Posts

    ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

    Share this… Facebook Pinterest Twitter Linkedin Whatsappನವದೆಹಲಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇಂದು ನವದೆಹಲಿಯಲ್ಲಿ ನಡೆದ…

    ಬಿಜೆಪಿ ಗೆಲುವು: ಬಿ.ಸಿ. ಪಾಟೀಲ ಹೇಳಿದ್ದೇನು?

    Share this… Facebook Pinterest Twitter Linkedin Whatsappರಾಜಸ್ಥಾನದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿ.ಸಿ.…

    You cannot copy content of this page