6

ರಾತ್ರಿ ಜಗಳ: ಬಿಡಿಸಲು ಹೋದ ಅಜ್ಜಿಯ ಕೈ ಮುರಿತ!

ಹೊನ್ನಾವರ: ರಾತ್ರಿ ವೇಳೆ ಜಗಳಕ್ಕೆ ಬಂದ ಶ್ರೀಧರ ಮಂಜು ಗೌಡರಿಗೆ `ಬೆಳಗ್ಗೆ ಮಾತನೋಡೋಣ’ ಎಂದು ಸಮಾಧಾನ ಮಾಡಲು ಹೋಗಿದ್ದ ಮಾದೇವಿ ಗೌಡ ತಮ್ಮ ಕೈ ಮುರಿದುಕೊಂಡಿದ್ದಾರೆ.

ಮೇಲಿನ ಇಡಗುಂಜಿ ಖಾರ್ವಾ ಬಳಿಯ ನಾತಗೇರಿ ಕುಳಿಮನೆಯ ಶ್ರೀಧರ ಗೌಡ ದೊಣ್ಣೆಯಿಂದ ಹೊಡೆದು ಮಾದೇವಿ ಗೌಡರ ಕೈ ಮುರಿದಿದ್ದಾನೆ. ನ 12ರಂದು ರಾತ್ರಿ 1 ಗಂಟೆ ವೇಳೆಗೆ ಮಾದೇವಿ ಗೌಡರ ಅಳಿಯ ದೇವ ಗೌಡರ ಬಳಿ ಶ್ರೀಧರ ಗೌಡ ಜಗಳ ತೆಗೆದಿದ್ದ. ಆಗ, ಜಗಳ ಬಿಡಿಸಲು ಮಾದೇವಿ ಗೌಡ ಹಾಗೂ ಅವರ ಪುತ್ರಿ ಮಂಗಲಾ ದೇವ ಗೌಡ ಬಂದಿದ್ದರು. ಆಗ, ಮಾದೇವಿ ಗೌಡ `ನಾಳೆ ಬೆಳಗ್ಗೆ ಮಾತನಾಡೋಣ. ರಾತ್ರಿ ಜಗಳ ಬೇಡ’ ಎಂದಿದ್ದರು.

ಇದರಿoದ ಸಿಟ್ಟಾದ ಶ್ರೀಧರ ಗೌಡ ಅಲ್ಲಿದ್ದ ದೊಣ್ಣೆಯಿಂದ ಮಾದೇವಿ ಅವರ ಬಲಗೈಗೆ ಹೊಡೆದು, ಆ ಕೈ ಮುರಿದಿದ್ದಾನೆ. ಈ ವೇಳೆ ಮಂಗಲಾ ಗೌಡ 112ಗೆ ಕರೆ ಮಾಡಿ ಪೊಲೀಸರನ್ನು ಕರೆಯಿಸುವುದನ್ನು ನೋಡಿ ಅವರ ಕಡೆಯೂ ದೊಣ್ಣೆ ಬೀಸಿದ್ದಾನೆ. ಹೀಗಾಗಿ ಮಂಜು ಗೌಡರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page