6

ಕಸಾಯಿಖಾನೆಗೆ ಹೋಗುತ್ತಿದ್ದ ಜಾನುವಾರುಗಳಿಗೆ ಗೋಶಾಲೆಯ ಆಶ್ರಯ

ಯಲ್ಲಾಪುರ: ಕಸಾಯಿಖಾನೆಗೆ ಸಾಗಿಸುತ್ತಿದ್ದ ಕೋಣ ಹಾಗೂ ಎತ್ತುಗಳನ್ನು ಪೊಲೀಸರು ಬಿಡಿಸಿದ್ದಾರೆ.

ಬೆಳಗಾವಿಯ ಯಮನಕರಡಿಯಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಒಟ್ಟು 12 ಜಾನುವಾರುಗಳಿಗೆ ಪೊಲೀಸರು ಬಿಡುಗಡೆ ಭಾಗ್ಯ ನೀಡಿದರು. ರಾಷ್ಟೀಯ  ಹೆದ್ದಾರಿ ಮೂಲಕ ಈ ಪ್ರಮಾಣದಲ್ಲಿ ಜಾನುವಾರು ಸಾಗಾಟ ನಡೆಯುತ್ತಿದ್ದರೂ ದಾರಿ ನಡುವೆ ಸಿಗುವ ಯಾವ ಪೊಲೀಸರು ವಾಹನಕ್ಕೆ ಅಡ್ಡಲಾಗಿ ಕೈ ಮಾಡಿರಲಿಲ್ಲ. ಜೋಡಕೆರೆ ಬಳಿ ಲಾರಿ ನಿಲ್ಲಿಸಿದ ಪೊಲೀಸರು ಜಾನುವಾರುಗಳನ್ನು ಗೋ ಶಾಲೆಗೆ ರವಾನಿಸಿದರು.

ನ 12ರ ರಾತ್ರಿ 12 ಗಂಟೆ ವೇಳೆಗೆ ಪಿಎಸ್‌ಐ ಸಿದ್ದಪ್ಪ ಗುಡಿ ಜೋಡಕೆರೆ ಬಳಿ ಅಕ್ರಮ ಜಾನುವಾರು ಸಾಗಾಟದ ಲಾರಿ ತಡೆದರು. ಆಗ, ಮೈಸೂರಿನ ಸನ್ಮಾನ ಹಡಗಲಿ, ಮುಕ್ರಂ ಪಾಷಾ ಹಾಗೂ ಹಾಸನದ ಗಣೇಶ ಕಳೆಗೌಡ ಸಿಕ್ಕಿಬಿದ್ದರು. ಅವರ ಜೊತೆಯಿದ್ದ 2.20 ಲಕ್ಷ ರೂ ಮೌಲ್ಯದ ಜಾನುವಾರುಗಳನ್ನು ಪೊಲೀಸರು ಬದುಕಿಸಿದರು.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page