6

ಕಸ್ತೂರಿ ರಂಗನ್ ಜಾರಿಗೆ ವಿರೋಧ: ಕೇಂದ್ರದ ಮೇಲೆ ಒತ್ತಡ

ಸಿದ್ದಾಪುರ: `ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಒಪ್ಪುವವರೆಗೂ ಅರಣ್ಯ ಅತಿಕ್ರಮಣದಾರರ ಹೋರಾಟ ನಿರಂತರ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಘೋಷಿಸಿದ್ದಾರೆ.

ಸಿದ್ದಾಪುರದ ಬಾಲಭವನದಲ್ಲಿ ಗುರುವಾರ ಸಭೆ ನಡೆಸಿ ಮಾತನಾಡಿದ ಅವರು `ಕೇಂದ್ರ ಸರ್ಕಾರವು ಕಸ್ತೂರಿರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಬೇಕು. ಸರ್ಕಾರದ ಮೇಲೆ ಒತ್ತಡ ತರಲು ಅರಣ್ಯವಾಸಿಗಳೆಲ್ಲರೂ ನ 21ರಂದು ಬೆಂಗಳೂರಿಗೆ ಬರಬೇಕು’ ಎಂದು ಕರೆ ನೀಡಿದರು.

`ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದೆ. ಮಂಜೂರಿ ಪ್ರಕ್ರಿಯೆಯಲ್ಲಿ ಇರುವ ಕಾನೂನಾತ್ಮಕ ಸಮಸ್ಯೆ ಬಗೆಹರಿಸಲು ಹೋರಾಟ ಅನಿವಾರ್ಯ’ ಎಂದರು. ಸಭೆಯಲ್ಲಿ ಮಾಬ್ಲೇಶ್ವರ ನಾಯ್ಕ ಸ್ವಾಗತಿಸಿದ್ದರು. ಕೆ.ಟಿ ನಾಯ್ಕ, ವಿನಾಯಕ ನಾಯ್ಕ, ಚೌಡು ತಿಮ್ಮಣ್ಣ ಗೌಡ್ರು, ಜಯಂತ ನಾಯ್ಕ, ರವೀಂದ್ರ ನಾಯ್ಕ, ಭಾಸ್ಕರ ನಾಯ್ಕ, ಮೋಹನ ನಾಯ್ಕ, ಹಜರಾ ಬೇಗಂ, ಮಂಜುಳಾ ನಾಯ್ಕ, ರಾಧಾ ಹಾಸಿಕಟ್ಟಾ, ತಿಮ್ಮಪ್ಪ ನಾಯ್ಕ, ಡಿ.ಕೆ. ಹಾಸಣಗಿ, ಮೋಹನಾ ನಾಯ್ಕ, ಕಾರ್ಲಿಸ್ ಫರ್ನಾಂಡಿಸ್, ಎ.ಬಿ ನಾಯ್ಕ, ರಾಮಚಂದ್ರ ನಾಯ್ಕ ಇದ್ದರು.

  • Related Posts

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page