6

ಗುಡುಗುಸಹಿತ ಮಳೆ | ಸಂತೆಗೆ ಬಂದವರಿಗೆ ಸಿಡಿಲ ಆಘಾತ!

ಕುಮಟಾ: ಗೋಕರ್ಣದಲ್ಲಿ ನಡೆಯುವ ವಾರದ ಸಂತೆಗೆ ಬಂದವರಿಗೆ ಸಿಡಿಲು ಬಡಿದಿದೆ.

ಗುರುವಾರ ಸಂಜೆ 4 ಗಂಟೆ ವೇಳೆಗೆ ಗೋಕರ್ಣದಲ್ಲಿ ಗುಡುಗುಸಹಿತ ಮಳೆ ಶುರುವಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಕೆಲವರು ಮರದ ಕೆಳಗೆ ನಿಂತರು. ಈ ವೇಳೆ ನಾಲ್ವರಿಗೆ ಸಿಡಿಲು ಬಡಿಯಿತು.

ಬಿದ್ರಗೇರಿಯ ಪರಮೇಶ್ವರ ಗೌಡ(56), ಬಿಹಾರದಿಂದ ಬಂದಿದ್ದ ನೂರ ಅಲಮಾ(40), ಮಹ್ಮದ್ ಆಜಾದ್ (30), ಆಯುಷ್‌ಕುಮಾರ (30) ಸಿಡಿಲಿನಿಂದ ಗಾಯಗೊಂಡರು. ಬಿಹಾರದ ಮೂವರು ರೆಸಾರ್ಟ ಕಟ್ಟಡ ನಿರ್ಮಾಣಕ್ಕಾಗಿ ಗೋಕರ್ಣಕ್ಕೆ ಬಂದವರಾಗಿದ್ದರು.

ಗಾಯಗೊಂಡ ನಾಲ್ವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಹಾಗೂ ಡಾ ದಿವ್ಯಾ ಜೊತೆ ಸಿಬ್ಬಂದಿ ಅವರನ್ನು ಜೀವಾಪಾಯದಿಂದ ಪಾರು ಮಾಡಿದ್ದಾರೆ. ಸಿಡಿಲಿನಿಂದ ಒಳಪೆಟ್ಟು ಆದವರಿಗೆ ವ್ಯಾಯಾಮ ಮಾಡಿಸಲಾಗುತ್ತಿದೆ. ಎಲ್ಲರಿಗೂ ಚಿಕಿತ್ಸೆ ಮುಂದುವರೆದಿದೆ.

  • Related Posts

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    You cannot copy content of this page