6

ಕರಾಟೆ ಪಟುವಿಗೆ ಬೆದರಿಸಿದ ಜೆಸಿಬಿ ಚಾಲಕ | ಸರ್ಕಾರಕ್ಕೆ ನಷ್ಟ: ಮೀನುಗಾರನಿಗೆ ಸಂಕಷ್ಟ!

ಭಟ್ಕಳ: ತೆಂಗಿನಗುoಡಿ ನದಿ ಬಳಿ ಬಂದರು ಇಲಾಖೆಗೆ ಸೇರಿದ ಕಟ್ಟಡವನ್ನು ಮೂವರು ದುಷ್ಕರ್ಮಿಗಳು ಸೇರಿ ಧ್ವಂಸ ಮಾಡಿದ್ದಾರೆ.

ಕರಾಟೆ ಮಾಸ್ಟರ್ ಉಮೇಶ ಮೊಗೇರ್ ಈ ಕಟ್ಟಡದಲ್ಲಿ ಒಣಮೀನು ದಾಸ್ತಾನು ಮಾಡಿದ್ದರು. ಏಕಾಏಕಿ ಕಟ್ಟಡ ನೆಲಸಮವಾಗಿದ್ದರಿಂದ ಒಣ ಮೀನುಗಳೆಲ್ಲವೂ ಮಣ್ಣು ಪಾಲಾಗಿದೆ. ಹೆಬಳೆ ಮಲ್ಲಜ್ಜನ ಮನೆಯ ಉಮೇಶ ರಾಮಾ ಮೊಗೇರ್ ಅವರ ತಂದೆ ಕಾಲದಿಂದಲೂ ಈ ಕಟ್ಟಡವನ್ನು ಅವರು ಬಳಸುತ್ತಿದ್ದರು. 15 ವರ್ಷಗಳಿಂದ ಉಮೇಶ ಮೊಗೇರ್ ಅವರು ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ಇದಕ್ಕಾಗಿ ತೆರಿಗೆಯನ್ನು ಸಹ ಅವರೇ ಪಾವತಿಸುತ್ತಿದ್ದರು.

ಗಾಳಿ-ಮಳೆಗೆ ಕಟ್ಟಡದ ಶೀಟ್ ಹಾರಿ ಹೋದಾಗ ಸರ್ಕಾರದಿಂದ ರಿಪೇರಿ ಮಾಡಿಸಿದ್ದು, ಈ ಕಟ್ಟಡದ ಮೇಲೆ ಬಂದರು ಇಲಾಖೆ ಹೊರತುಪಡಿಸಿ ಬೇರೆ ಯಾರಿಗೂ ಹಕ್ಕಿರಲಿಲ್ಲ. ಅದಾಗಿಯೂ ಅ 26ರಂದು ಚಬ್ಬಿಮನೆಯ ನಾರಾಯಣ ಮೊಗೇರ್, ಲಕ್ಷö್ಮಣ ಮಂಜುನಾಥ ಕರ್ಕಿಮನೆಯ ಹಾಗೂ ಮಾವಿನಕಟ್ಟೆಯ ಜೆಸಿಬಿ ಚಾಲಕ ಗಣೇಶ ನಾಯ್ಕ ಸೇರಿ ಆ ಕಟ್ಟಡವನ್ನು ಧ್ವಂಸ ಮಾಡಿದ್ದಾರೆ. ಆ ವೇಳೆ ಅಲ್ಲಿ ಒಣಗಿಸಿದ್ದ ಒಣ ಮೀನುಗಳೆಲ್ಲವೂ ನಾಶವಾಗಿದೆ. ಏಕಾಏಕಿ ಆಗಮಿಸಿ ಧ್ವಂಸ ಮಾಡಿದನ್ನು ಪ್ರಶ್ನಿಸಿದ ಕರಾಟೆ ಪಟು ಉಮೇಶ ಮೊಗೇರ್ ಅವರನ್ನು ಬೆದರಿಸಿದ್ದಾರೆ. `ಇಲ್ಲಿಯೇ ಇದ್ದರೆ ಜೆಸಿಬಿಯಿಂದ ಅಗೆದು ಮಣ್ಣಿನ ಅಡಿ ಹೂತು ಹಾಕುವೆ’ ಎಂದು ಎದುರುದಾರರು ಬೆದರಿಸಿದ ಬಗ್ಗೆ ಉಮೇಶ್ ಮೊಗೇರ್ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page