6

ಸ್ಯಾಮಸಂಗ್-ರೆಡ್ಮಿ ಫೋನ್ ಜಪ್ತಿ: ಮೊಬೈಲ್ ಮಟ್ಕಾವನ್ನು ಬಿಡದ ಪೊಲೀಸರು!

ಜೊಯಿಡಾ: ರಾಮನಗರ ಬಳಿಯ ಲಕ್ಷ್ಮೀವಾಡದಲ್ಲಿ ಮೊಬೈಲ್ ಫೋನ್ ಮೂಲಕ ಮಟ್ಕಾ ಆಡಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಟ್ಕಾ ಆಡಿಸುತ್ತಿದ್ದ ಇಬ್ಬರ ಜೊತೆ ಮಟ್ಕಾ ಹಣ ಸಂಗ್ರಹಿಸುತ್ತಿದ್ದವನ ಮೇಲೆಯೂ ಇದೀಗ ಪೊಲೀಸ್ ಪ್ರಕರಣ ದಾಖಲಾಗಿದೆ.

ಕ್ಯಾಸಲರಾಕ್ ದೋಬಿವಾಡದ ಅಬ್ದುಲ್ ರಶೀದ್ ಮೊಬೈಲ್ ಮೂಲಕ ಹಲವರಿಗೆ ಫೋನ್ ಮಾಡಿ `1 ರೂಪಾಯಿಗೆ 80 ರೂ ಕೊಡುವೆ’ ಎಂದು ಆಮೀಷ ಒಡ್ಡುತ್ತಿದ್ದ. `ವಾಟ್ಸಪ್ ಮೂಲಕ ಸಂಖ್ಯೆ ಬರೆದು ಕಳುಹಿಸಿ’ ಎನ್ನುವ ಆತ ಆನ್‌ಲೈನ್ ಮೂಲಕ ಮಟ್ಕಾ ಹಣ ಪಡೆಯುತ್ತಿದ್ದ. ಅನೇಕರು ವಾಟ್ಸಪ್ ಮೂಲಕ ಮಟ್ಕಾ ಸಂಖ್ಯೆ ಬರೆದು ಚೀಟಿ ಕಳುಹಿಸುತ್ತಿದ್ದರು. ನಿತ್ಯ ಈ ರೀತಿ ಮಟ್ಕಾ ಆಡಿಸುವುದನ್ನು ಕಾಯಕವನ್ನಾಗಿಸಿಕೊಂಡಿದ್ದ ಅಬ್ದುಲ್ ರಶೀದ್ ಸಂಜೆ ವೇಳೆ ಮೊಬೈಲಿಗೆ ಬಂದ ಎಲ್ಲಾ ಚೀಟಿಯನ್ನು ಡಿಲಿಟ್ ಮಾಡುತ್ತಿದ್ದ. ಈತನ ಮಟ್ಕಾ ಆಡಿಸುವ ಕೆಲಸಕ್ಕೆ ಅದೇ ಊರಿನ ಇಮ್ತಾಯಿಜ್ ಪಠಾಣಾ ಸಹ ಸೇರಿಕೊಂಡಿದ್ದ.

ನ 13ರಂದು ಸಿಪಿಐ ಚಂದ್ರಶೇಖರ ಹರಿಹರ್ ಈ ವಿಷಯ ಅರಿತು ಅಬ್ದುಲ್ ರಶೀದ್’ನ ಸ್ಯಾಮಸಂಗ್ ಹಾಗೂ ಇಮ್ತಾಯಿಜ್ ಪಠಾಣಾ’ನ ರೆಡ್ಮಿ ಮೊಬೈಲ್ ವಶಕ್ಕೆ ಪಡೆದರು. ವಾಟ್ಸಪ್ ಪರಿಶೀಲಿಸಿದಾಗ ಅಲ್ಲಿ ಮಟ್ಕಾ ಆಟದ ಚೀಟಿಗಳು ಕಾಣಿಸಿದವು. ಗ್ಯಾಲರಿಯಲ್ಲಿ ಸಹ ಅಂಕಿ-ಸoಖ್ಯೆ ಬರೆದ ಚೀಟಿಗಳು ಸಾಕಷ್ಟಿದ್ದವು. ಆ ಎಲ್ಲಾ ದಾಖಲೆಗಳ ಪ್ರಿಂಟ್ ಪಡೆದ ಪೊಲೀಸರು `ಸಂಗ್ರಹವಾದ ಹಣವನ್ನು ಯಾರಿಗೆ ಕೊಡುವೆ?’ ಎಂದು ಅವರಿಬ್ಬರಲ್ಲಿಯೂ ಪ್ರಶ್ನಿಸಿದರು. ಆಗ ದಾಂಡೇಲಿಯ ಮಸ್ತಾಕ್ ಮಿಶ್ರಿಕೋಟೆ ಹೆಸರು ಕೇಳಿ ಬಂದಿದ್ದು, ಆತನ ಮೇಲೆಯೂ ದಾಳಿ ಮಾಡಿದರು.

ಮಸ್ತಾಕ್ ಮಿಶ್ರಿಕೋಟೆ ಜೇಬಿನಲ್ಲಿ ಮಟ್ಕಾ ಆಟದಿಂದ ಸಂಗ್ರಹಿಸಿದ್ದ 1690ರೂ ಸಿಕ್ಕಿದ್ದು, ಈ ಮೂವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page