6

ನಿಯಮ ಉಲ್ಲಂಘಿಸಿದವರಿಗೆ ಗುಲಾಬಿ ಹೂ!

ಅಂಕೋಲಾ: ಪಟ್ಟಣದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದ ಪೊಲೀಸರು ಇದೀಗ ಗುಲಾಬಿ ಹೂ ನೀಡಿ ಗೌರವಿಸುತ್ತಿದ್ದಾರೆ!

ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಪೊಲೀಸರು ಸಾಕಷ್ಟು ಅರಿವು ಮೂಡಿಸಿದರೂ ಹೆಲ್ಮೆಟ್ ಧರಿಸದ ವಾಹನ ಸವಾರರ ಮನವೊಲೈಕೆಗಾಗಿ ಪೊಲೀಸರು ಈ ಕೆಲಸ ಮಾಡಿದರು. ಇದರೊಂದಿಗೆ ಸಂಚಾರಿ ನಿಯಮ ಪಾಲಿಸದೇ ಇದ್ದರೆ ಆಗುವ ಅನಾಹುತಗಳ ಬಗ್ಗೆಯೂ ಪೊಲೀಸರು ಬೈಕ್ ಸವಾರರಿಗೆ ಅರಿವು ಮೂಡಿಸಿದರು. ಇನ್ನೊಮ್ಮೆ ಇದೇ ರೀತಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ದಂಡ ವಿಧಿಸುವುದಾಗಿಯೂ ಎಚ್ಚರಿಸಿದರು!

ಇನ್ನೂ ಪಟ್ಟಣದಲ್ಲಿ ಸಂಚರಿಸುವ ಬಸ್ಸುಗಳ ಮೆಟ್ಟಿಲುಗಳ ಮೇಲೆ ಅನೇಕರು ನಿಂತು ಪ್ರಯಾಣಿಸುತ್ತಿದ್ದು, ಬಸ್ ಚಾಲಕ-ನಿರ್ವಾಹಕರು ಅಂಥವರನ್ನು ಬೈದು ಒಳಗೆ ದಬ್ಬುತ್ತಿದ್ದರು. ಆದರೆ, ಇದೀಗ ಪೊಲೀಸರು ಅಂಥವರನ್ನು ಮಾತನಾಡಿಸಿ ಅಪಾಯದ ಬಗ್ಗೆ ಮಾಹಿತಿ ನೀಡಿದರು. ಬಸ್ಸಿನಲ್ಲಿ ಜೋತಾಡುತ್ತಿರುವವರಿಗೆ ಒಳಗೆ ಕಳುಹಿಸಿ ಅರಿವು ಮೂಡಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page