6

4ನೇ ತರಗತಿ ಬಾಲಕಿ ಮೇಲೆ ದೌರ್ಜನ್ಯ: ಈತನೇ ಆ ಕಾಮುಕ!

ಶಿರಸಿ: ಹುತ್ಕಾರ ಶಾಲೆಗೆ ಬರುವ 4ನೇ ತರಗತಿ ಬಾಲಕಿ ಮೇಲೆ ಕೈ ಹಾಕಿದ ಕಾಮುಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನ 20ರಂದು ಬೆಳಗ್ಗೆ ಬೇಗ ಶಾಲೆಗೆ ಬಂದ ಬಾಲಕಿ ಮೇಲೆ ಕೃಷ್ಣಾ ಮೊಗೇರ ದೌರ್ಜನ್ಯ ಎಸಗಿದ್ದ. ಬಾಲಕಿ ಬೊಬ್ಬೆ ಹೊಡೆದಾಗ ಆತ ತನ್ನ ಬೈಕ್ ಏರಿ ಪರಾರಿಯಾಗಿದ್ದ. ಇದರಿಂದ ಶಾಲೆಯಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಗಿದ್ದು, ಪಾಲಕರು ಆತಂಕಕ್ಕೆ ಒಳಗಾಗಿದ್ದರು. ಪೊಲೀಸರು ಸ್ಥಳ ಭೇಟಿ ನಡೆಸಿ ಪರಿಶೀಲನೆ ನಡೆಸಿದ್ದರು. ಆದರೆ, ಆರೋಪಿ ಮಾತ್ರ ಪತ್ತೆ ಆಗಿರಲಿಲ್ಲ.

ಈ ಪ್ರಕರಣವನ್ನು ಗಂಭೀರವಾಗಿ ಸಿಪಿಐ ಸೀತಾರಾಮ ವಿವಿಧ ಆಯಾಮಗಳಿಂದ ಹುಡುಕಾಟ ನಡೆಸಿದರು. ಪಿಎಸ್‌ಐ ಪ್ರತಾಪ ಹಾಗೂ ದಯಾನಂದ ಜೋಗಳೇಕರ್ ಅಲ್ಲಿನವರ ಚಲನ-ವಲನಗಳ ಮೇಲೆ ನಿಗಾ ಇರಿಸಿದ್ದರು.

ಇದನ್ನು ಓದಿ: ಶಾಲಾ ಬಾಲಕಿ ಮೇಲೆ ದೌರ್ಜನ್ಯ

ಕೊನೆಗೆ ಪೊಲೀಸ್ ಸಿಬ್ಬಂದಿ ಸಂತೋಷ್ ಶೆಟ್ಟಿ, ಗಣಪತಿ ಪಟಗಾರ, ರವಸಾಹೇಬ್ ಕಿತ್ತೂರು, ದಯಾನಂದ ಹುಂಡೇಕರ್ ಸೇರಿ ಹುತ್ಕಾರ್ ಊರಿನ ಕೃಷ್ಣಾ ಮೊಗೇರ್’ನನ್ನು ವಶಕ್ಕೆ ಪಡೆದು ಬಾಯ್ಬಿಡಿಸಿದರು. ಪ್ರಸ್ತುತ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page