6

ಶವ ತರಲು ಹೋದವರು ಆಸ್ಪತ್ರೆ ಸೇರಿದರು!

ಸಿದ್ದಾಪುರ: ಅಜ್ಜಿ ಸಾವನಪ್ಪಿದ ಸುದ್ದಿ ಕೇಳಿ ಶವ ತರಲು ಕುಮಟಾಗೆ ಹೊರಟ್ಟಿದ್ದ ಸೂರ್ಯನಾರಾಯಣ ಹೆಗಡೆ ಅವರ ಕಾರು ಅಪಘಾತವಾಗಿದೆ. ಪರಿಣಾಮ ಕಾರಿನಲ್ಲಿದ್ದ ಅವರ ತಾಯಿ ಗಂಗಾ ಹೆಗಡೆ ಹಾಗೂ ತಮ್ಮ ಚಂದ್ರಕಾoತ ಹೆಗಡೆ ಗಾಯಗೊಂಡಿದ್ದಾರೆ.

ನ 24ರಂದು ಅಸವಳ್ಳಿ ಬಳಿಯ ಗುಂಜಗೋಡಿನ ಸೂರ್ಯನಾರಾಯಣ ಹೆಗಡೆ ಅವರ ಅಜ್ಜಿ ಕುಮಟಾದಲ್ಲಿ ಸಾವನಪ್ಪಿದ್ದರು. ಈ ವಿಷಯ ತಿಳಿದ ಅವರು ಸಂಜೆ 5.50ರ ವೇಳೆಗೆ ಅಜ್ಜಿಯ ಶವವನ್ನು ಸಿದ್ದಾಪುರಕ್ಕೆ ತರಲು ಕಾರಿನಲ್ಲಿ ಹೊರಟಿದ್ದರು. ಹಸ್ವಗುಳಿ ತಲುಪಿದಾಗ ಎದುರಿನಿಂದ ಬಂದ ಬೆಳ್ಳಿ ಬೆಣ್ಣದ ಮಾರುತಿ ಸುಜುಕಿ ಕಾರು ವೇಗವಾಗಿ ಬರುವುದನ್ನು ಸೂರ್ಯನಾರಾಯಣ ಹೆಗಡೆ ನೋಡಿದರು. ಹೀಗಾಗಿ ಅವರು ತಮ್ಮ ಕಾರನ್ನು ನಿಧಾನಗೊಳಿಸಿ, ರಸ್ತೆ ಬದಿಗೆ ಸರಿದರು. ಅದಾಗಿಯೂ ಎದುರಿನಿಂದ ಬಂದ ಕಾರು ಅವರ ಕಾರಿಗೆ ಗುದ್ದಿತು.

ಅಪಘಾತಪಡಿಸಿದ ಕಾರನ್ನು ಸಿದ್ದಾಪುರ ಕೊಂಡ್ಲಿಯ ಗ್ಯಾರೇಜ್ ಮೆಕಾನಿಕ್ ಮಂಜುನಾಥ ನಾಯ್ಕ ಓಡಿಸುತ್ತಿದ್ದರು. ಅಪಘಾತವಾದರೂ ಅವರು ಕಾರನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾದರು. ಅಪಘಾತದ ರಭಸಕ್ಕೆ ಗಂಗಾ ಅವರ ತಲೆ ಬೆನ್ನಿಗೆ ಗಾಯವಾಗಿದ್ದು, ಚಂದ್ರಕಾAತ ಸಹ ಕೈ-ಮೊಣಕೈಗೆ ಗಾಯ ಮಾಡಿಕೊಂಡರು. ಹೀಗಾಗಿ ಆಂಬುಲೆನ್ಸ ಮೂಲಕ ಗಾಯಗೊಂಡವರನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿ, ನಂತರ ಸಾಗರದ ಭಾಗ್ವತ ಆಸ್ಪತ್ರೆಗೆ ಸೇರಿಸಲಾಯಿತು.

ಅದಾಗಿಯೂ ಕಾರು ಅಪಘಾತ ಮಾಡಿ ಪರಾರಿಯಾದ ಮಂಜುನಾಥ ನಾಯ್ಕ ಅಲ್ಲೆಲ್ಲಿಯೂ ಬರಲಿಲ್ಲ. ಅಪಘಾತ ಆದವರನ್ನು ಉಪಚಿರಿಸಿಲ್ಲ. ಪೊಲೀಸರಿಗೂ ಮಾಹಿತಿ ನೀಡಲಿಲ್ಲ. ಈ ಹಿನ್ನಲೆ ಸೂರ್ಯನಾರಾಯಣ ಹೆಗಡೆ ಪೊಲೀಸ್ ದೂರು ನೀಡಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page