6

ಸರ್ಕಾರಿ ಶಾಲೆಯಲ್ಲಿ ಅವಘಡ: ಬಾಲಕಿಯ ಜೀವ ತೆಗೆದ ಅಕ್ರಮ ವಿದ್ಯುತ್ ಸಂಪರ್ಕ!

ಹಳಿಯಾಳ: ಸರ್ಕಾರಿ ಶಾಲೆಗೆ ಅಳವಡಿಸಿದ್ದ ಅನಧಿಕೃತ ವಿದ್ಯುತ್ ಸಂಪರ್ಕ ಆ ಶಾಲೆಯ ವಿದ್ಯಾರ್ಥಿನಿಯ ಸಾವಿಗೆ ಕಾರಣವಾಗಿದೆ. ಶೌಚಾಲಯಕ್ಕೆ ತೆರಳಿದ್ದ ಸ್ವಾತಿ ಗೌಳಿ (8 ವರ್ಷ) ವಿದ್ಯುತ್ ತಗುಲಿ ಸಾವನಪ್ಪಿದ್ದಾರೆ.

ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ಸ್ವಾತಿ ಬಸವರಾಜ ಗೌಳಿ ಗುರುವಾರ ಮಧ್ಯಾಹ್ನ ಶೌಚಾಲಯಕ್ಕೆ ಹೋಗಿದ್ದರು. ಎಷ್ಟು ಹೊತ್ತಾದರೂ ಅವರು ಮರಳಿ ಬಾರದ ಬಗ್ಗೆ ಅನುಮಾನಗೊಂಡು ನೋಡಿದಾಗ ಸ್ವಾತಿ ಸಾವನಪ್ಪಿರುವುದು ಗೊತ್ತಾಗಿದೆ.

ಶಾಲೆಯ ಆವರಣದಲ್ಲಿನ ಬೋರ್‌ವೆಲ್’ಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದು, ವಿದ್ಯುತ್ ತಂತಿ ತುಂಡಾಗಿ ಶೌಚಾಲಯದ ಬಳಿ ಬಿದ್ದಿತ್ತು. ಶಾಲೆಗೆ ಪಡೆದ ಅನಧಿಕೃತ ವಿದ್ಯುತ್ ಸಂಪರ್ಕದ ತಂತಿ ಈ ಹಿಂದೆಯೂ ತುಂಡಾಗಿತ್ತು. ಆಗ ಗಂ ಟೇಪ್ ಅಂಟಿಸಿ ಸರಿಪಡಿಸಿದ್ದು, ಮತ್ತೆ ತುಂಡಾಗಿ ನೆಲಕ್ಕೆ ಬಿದ್ದಿದೆ. ವಿದ್ಯುತ್ ತಂತಿ ಬಿದ್ದಿರುವುದನ್ನು ಗಮನಿಸದೇ ತಂತಿ ತುಳಿದ ಸ್ವಾತಿ ಅಲ್ಲಿಯೇ ಕೊನೆ ಉಸಿರೆಳೆದರು.

ಬಾಲಕಿ ಸಾವಿನ ಹಿನ್ನಲೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಶಾಲೆ ಮುಂದೆ ನೂರಾರು ಜನ ಜಮಾಯಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೃತರ ಪಾಲಕರಿಗೆ ಸಾಂತ್ವಾನ ಹೇಳುವ ಪ್ರಯತ್ನ ನಡೆಸಿದರು. ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಶಾಲೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    One thought on “ಸರ್ಕಾರಿ ಶಾಲೆಯಲ್ಲಿ ಅವಘಡ: ಬಾಲಕಿಯ ಜೀವ ತೆಗೆದ ಅಕ್ರಮ ವಿದ್ಯುತ್ ಸಂಪರ್ಕ!”

    Comments are closed.

    You cannot copy content of this page