6

ಕೆಲಸಗಾರನ ಮನೆಯಲ್ಲಿ ಕಳ್ಳತನ: ಅಣ್ಣನ ಮಗನ ಮೇಲೆ ಅನುಮಾನ!

ಸಿದ್ದಾಪುರ: ಬೇಡ್ಕಣಿ ಠಾಣಗೇರಿಯ ಜಯಂತ ನಾಯ್ಕ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ.

ನ 14ರಂದು ಜಯಂತ ನಾಯ್ಕ ಅವರು ಗದ್ದೆ ಕೆಲಸಕ್ಕೆ ಹೋಗಿದ್ದರು. ಕೆಲಸಕ್ಕೆ ಹೋಗುವ ಮುನ್ನ ಮನೆಗೆ ಬೀಗ ಹಾಕಿದ್ದರು. ಸಂಜೆ ಅವರು ಮನೆಗೆ ಬಂದಾಗ ಮನೆ ಒಳಗಡೆಯಿಂದ ಚಿಲಕ ಹಾಕಿಕೊಂಡಿತ್ತು. ಹೀಗಾಗಿ ಅಣ್ಣನ ಮನೆ ಪಾರ್ಟೇಶನ್ ತೆರೆದು ಅಲ್ಲಿಂದ ಅವರು ಮನೆ ಒಳಗೆ ಪ್ರವೇಶಿಸಿದ್ದು, ಆಗ ಕಳ್ಳತನ ನಡೆದಿರುವುದು ಗೊತ್ತಾಯಿತು.

ಗೋದ್ರೇಜ್ ಕಪಾಟಿನ ಬಾಗಿಲು ತೆರೆದ ಕಳ್ಳರು ಅಲ್ಲಿದ್ದ ಬಂಗಾರದ ಬುಗುಡಿ, ಸರಪಳಿ, ಉಂಗುರ ಸೇರಿ 1.26 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ದೋಚಿದ್ದರು. ಈ ಬಗ್ಗೆ ಜಯಂತ ನಾಯ್ಕರು ಬೆಂಗಳೂರಿನಲ್ಲಿರುವ ಮಗನಿಗೆ ಫೋನ್ ಮಾಡಿ ತಿಳಿಸಿದ್ದು, ಮಗ ಸಹ ಮನೆಗೆ ಬಂದು ಕಳ್ಳತನವಾಗಿರುವುದನ್ನು ನೋಡಿದರು.

ಇನ್ನೂ ಕಳ್ಳತನ ನಡೆದಿ ದಿನದಿಂದ ಜಯಂತ ನಾಯ್ಕ ಅವರ ಅಣ್ಣನ ಮಗ ಗಣಪತಿ ನಾಯ್ಕ ಕಾಣುತ್ತಿಲ್ಲ. ಹೀಗಾಗಿ ಆತನೇ ಈ ಕಳ್ಳತನ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಜಯಂತ ನಾಯ್ಕ ಅಣ್ಣನ ಮಗನ ಮೇಲೆ ಅನುಮಾನವಿರುವುದಾಗಿ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page