6

ವೃದ್ಧೆ ಮೇಲೆ ದ್ವೇಷ.. ಬಂಗಾರದ ಮೇಲೆ ಆಸೆ!

ಜೋಯಿಡಾ: ಬಂಗಾರದ ಮೇಲಿನ ಆಸೆಗೆ ವೃದ್ಧೆಗೆ ಹೊಡೆದು ಚಿನ್ನ ಕದ್ದು ಪರಾರಿಯಾಗಿದ್ದ ಮಹಿಳೆಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.

ಕ್ಯಾಸಲ್‌ರಾಕ್ ಕಣಂಗಿಣಿ ರಸ್ತೆಯ ಲಕ್ಷ್ಮೀವಾಡ ಸಮೀಪ ವೃದ್ಧೆಯೊಬ್ಬರು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಬದುಕಿರಲಿಲ್ಲ.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಒಂದೊAದೇ ವಿಷಯ ಗೊತ್ತಾಗಿದ್ದು, ಸಿಸಿ ಕ್ಯಾಮರಾಗಳ ಆಧಾರದಲ್ಲಿ ರಾಮನಗರ ಕೆಪಿಸಿ ಕಾಲೋನಿಯ ಪ್ರತಿಮಾ ಪ್ರಕಾಶ ಮರಾಠರನ್ನು ವಿಚಾರಣೆಗೊಳಪಡಿಸಿದರು. ಆಗ ಪ್ರತಿಮಾ ವೃದ್ಧೆಯನ್ನು ಹೊಡೆದು ಚಿನ್ನಾಭರಣ ದೋಚಿರುವುದು ಬೆಳಕಿಗೆ ಬಂದಿತು.

ಇದನ್ನು ಓದಿ: ವೃದ್ಧೆ ಮೇಲೆ ಹಲ್ಲೆ ನಡೆದಿದ್ದು ಹೇಗೆ? ಆ ದಿನ ನಡೆದಿದ್ದೇನು?

ಸಾಲ ಮಾಡಿಕೊಂಡಿದ್ದ ಪ್ರತಿಮಾ ವೃದ್ಧೆಗೆ ನಾಟಿ ಔಷಧಿ ಕೊಡುವ ನೆಪದಲ್ಲಿ ಕಾಡಿಗೆ ಕರೆದೊಯ್ದು ಹಲ್ಲೆ ಮಾಡಿ, ಚಿನ್ನಾಭರಣ ಎಗರಿಸಿದ್ದು ತನಿಖೆಯಿಂದ ಗೊತ್ತಾಗಿದೆ. ಸುತ್ತಿಗೆಯಿಂದ ಹೊಡೆದ ಪರಿಣಾಮ ವೃದ್ಧೆ ಸಾವನಪ್ಪಿದ್ದು, ಪ್ರತಿಮಾರನ್ನು ಜೈಲಿಗೆ ಕಳುಹಿಸಲಾಗಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page