6

ಜಯ ಕರ್ನಾಟಕ | ಜನಪರ ವೇದಿಕೆಗೆ ಹೊಸ ಸಾರಥಿ!

ಕಾರವಾರ: ಹಲವು ವರ್ಷಗಳಿಂದ ಕನ್ನಡ ವಿಷಯವಾಗಿ ಹೋರಾಟ ನಡೆಸುತ್ತಿರುವ ಜಯಕರ್ನಾಟಕ ಜನಪರ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ.

ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಿ ಗುಣರಂಜನ್ ಶೆಟ್ಟಿ ಅವರು ಸಂಘಟನೆಗೆ ಶಕ್ತಿ ತುಂಬಲು ಕರೆ ನೀಡಿದ್ದು, ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀನಿವಾಸ್ ಅವರಿಂದಿಗೆ ಚರ್ಚಿಸಿ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೆಕರ್ ನೂತನ ಪದಾಧಿಕಾರಿಗಳನ್ನು ಘೋಷಿಸಿದರು. `ಎಲ್ಲಾ ಪದಾಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು’ ಎಂದವರು ಕರೆ ನೀಡಿದರು.

ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಮೀರ್ ಶೆಜವಾಡಕರ್, ಜಿಲ್ಲಾ ಉಪಾಧ್ಯಕ್ಷರಾಗಿ ಪ್ರದೀಪ್ ಶೆಟ್ಟಿ, ಸುನಿಲ್ ತಾಂಡೇಲ್. ಜಿಲ್ಲಾ ಸಹ ಕಾರ್ಯದರ್ಶಿಯಾಗಿ ದಿಲೀಪ್ ನಾಗೇಕರ್, ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಸುದೇಶ್ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ದಿಲೀಪ್ ಉಳ್ವೇಕರ್, ಜಿಲ್ಲಾ ಯುವ ಉಪಾಧ್ಯಕ್ಷರಾಗಿ ಅಜಿತ್ ತಳೇಕರ್ ಅವರಿಗೆ ಜವಾಬ್ದಾರಿ ನೀಡಲಾಯಿತು.

ಜಿಲ್ಲಾ ಕಾರ್ಯದರ್ಶಿಯಾಗಿ ಭರತ್ ಕಾರ್ವಿ, ಸಹ ಕಾರ್ಯದರ್ಶಿಯಾಗಿ ನಂದೀಶ್ ಮಾಜಾಲಿಕರ್, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರಾಗಿ ಸಂತೋಷ್ ಹಾವೇರಿ, ನಾಗರಾಜ್ ಅವರ್ಸೇಕರ್, ಕಾರವಾರ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್ ಹರಿಕಂತ್ರ. ತಾಲೂಕ ಕಾರ್ಯದರ್ಶಿಯಾಗಿ ವಿನೋದ್ ದುರ್ಗೇಕರ್. ಶ್ರೀನಿವಾಸ್ ಹರಿಕಂತ್ರ, ತಾಲೂಕ ಸಹ ಕಾರ್ಯದರ್ಶಿಯಾಗಿ ಸಚಿನ್ ಅಂಬಿಗ, ರೋಷನ್ ನಾಗೇಕರ್, ತಾಲೂಕು ಉಪಾಧ್ಯಕ್ಷರಾಗಿ ಸಂತೋಷ್ ಪಡ್ತಿ, ಗಜಾನನ ಗುನಗಿ ಆಯ್ಕೆಯಾದರು.

ಸಂಘಟನೆಯ ಕಾರ್ಯಾಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಉಪಾಧ್ಯಕ್ಷ ರಫೀಕ್ ಉದ್ದಾರ್, ಜಿಲ್ಲಾ ಯುವ ಘಟಕದ ಕಾರ್ಯಧ್ಯಕ್ಷ ರಾಹುಲ್ ತಾಂಡೇಲ್, ಕಾರವಾರ ತಾಲೂಕ ಅಧ್ಯಕ್ಷ ಮೋಹನ್ ಉಳ್ವೇಕರ್, ಕಾರವಾರ ತಾಲೂಕ ಕಾರ್ಯಧ್ಯಕ್ಷ ವಿನಯ್ ನಾಯ್ಕ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page