6

ಕುಮಟಾ ಆಸ್ಪತ್ರೆ: ಲಭ್ಯವಿಲ್ಲದ ವೈದ್ಯರ ಪಟ್ಟಿಯೇ ದೊಡ್ಡದು!

ಕುಮಟಾ: ಬೇರೆ ಬೇರೆ ತಾಲೂಕಿಗೆ ಹೋಲಿಸಿದರೆ ಕುಮಟಾದಲ್ಲಿನ ಸರ್ಕಾರಿ ಆಸ್ಪತ್ರೆ ಸ್ವಚ್ಛತೆ ಹಾಗೂ ಸೇವೆಯಲ್ಲಿ ಉತ್ತಮವಾಗಿದೆ. ಆದರೆ, ರೋಗಿಗಳ ಅನುಕೂಲಕ್ಕೆ ತಕ್ಕಂತೆ ವೈದ್ಯರು ಸಿಗುವುದಿಲ್ಲ. `ಲಭ್ಯವಿದ್ದಾರೆ’ ಎಂಬ ಹಣೆಪಟ್ಟಿ ಹೊಂದಿದ ವೈದ್ಯರ ಕೊಠಡಿ ಸಹ ಖಾಲಿ ಖಾಲಿ ಎಂಬ ದೂರು ಕೇಳಿ ಬಂದಿದೆ.

ಗುರುವಾರ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಕುಮಟಾದ ಸರಕಾರಿ ಆಸ್ಪತ್ರೆಗೆ ಹೋಗಿದ್ದರು. ಆ ಆಸ್ಪತ್ರೆಯಲ್ಲಿನ 5 ವೈದ್ಯರು ಈ ದಿನ ರಜೆಯಲ್ಲಿದ್ದರು. `ಲಭ್ಯವಿದ್ದಾರೆ’ ಎಂಬ ಬೋರ್ಡಿನ ಜೊತೆ ಹೆಸರು ಹೊಂದಿದ ವೈದ್ಯರೊಬ್ಬರು 12ಗಂಟೆಗೆ ಬಂದು 3 ಗಂಟೆಗೆ ಮರಳಿದರು. ಇದರಿಂದ ರೋಗಿಗಳು ಸಮಸ್ಯೆ ಅನುಭವಿಸಿದರು.

`ವೈದ್ಯರನ್ನು ಭೇಟಿ ಮಾಡಲು ರೋಗಿಗಳು ದಿನವಿಡೀ ಕಾಯುತ್ತಿದ್ದಾರೆ. ಲಭ್ಯವಿರುವ ವೈದ್ಯರು ಸಮಯಕ್ಕೆ ಸರಿಯಾಗಿ ಬಂದರೆ ಅನುಕೂಲ. ವೈದ್ಯರು ರಜೆ ಮೇಲಿದ್ದರೆ ಆ ಬಗ್ಗೆಯೂ ಸ್ಪಷ್ಠವಾಗಿ ನಾಮಫಲಕ ಅಳವಡಿಸಬೇಕು’ ಎಂದು ಆಗ್ನೇಲ್ ರೋಡ್ರಿಗ್ಸ್ ಆಗ್ರಹಿಸಿದರು. ಈ ಬಗ್ಗೆ ಡಿಎಚ್‌ಓ ಡಾ ನೀರಜ್ ಅವರಿಗೂ ಫೋನ್ ಮಾಡಿ ಮಾಹಿತಿ ನೀಡಿರುವುದಾಗಿ ಅವರು ಹೇಳಿದರು.

`ಈ ಅವಧಿಯಲ್ಲಿ ಎಲುಬು ಹಾಗೂ ಹಲ್ಲಿನ ಡಾಕ್ಟರ್ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿತು’ ಎಂದವರು ವಿವರಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page