6

ರಭಸ ನೀರಿಗೆ ರಸ್ತೆ ಕೊರೆತದ ಆತಂಕ: ಪಿಚ್ಚಿಂಗ್ ನಿರ್ಮಾಣಕ್ಕೆ ಆಗ್ರಹ

ಯಲ್ಲಾಪುರ: ಶಿರಸಿ-ಯಲ್ಲಾಪುರ ರಸ್ತೆಯ ತೂಕದಬೈಲ್ ಘಟ್ಟದ ಬಳಿ ಮಳೆ ನೀರಿಗೆ ರಸ್ತೆ ಕೊರೆಯುವ ಆತಂಕ ಎದುರಾಗಿದೆ. ಈಗಾಗಲೆ ರಸ್ತೆ ಅಂಚಿನ ಗಟಾರ ಕೊಚ್ಚಿ ಹೋಗಿದ್ದು, ಮುಂದಿನ ಮಳೆಯೊಳಗೆ ರಸ್ತೆ ಕೊರೆತ ಉಂಟಾಗದoತೆ ತಡೆಯಲು ಪಿಚ್ಚಿಂಗ್ ಕಟ್ಟಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಕಾಸ ನಾಯ್ಕ ಮಂಚಿಕೇರಿ ಆಗ್ರಹಿಸಿದ್ದಾರೆ.

`ಪ್ರತಿ ವರ್ಷ ಮಳೆಗಾಲದಲ್ಲಿ ಘಟ್ಟದ ಬುಡಕ್ಕೆ ರಭಸ ನೀರು ಬರುತ್ತದೆ. ಮಂಚಿಕೇರಿಗೆ ನೀರು ಸರಬರಾಜು ಮಾಡುವ ಬೋರ್‌ವೆಲ್ ಸಹ ಇರುವುದರಿಂದ ಆ ಪ್ರದೇಶ ತೇವಗೊಂಡಿದ್ದು, ಮಣ್ಣು ಕೊಚ್ಚಿ ಹೋಗುತ್ತಿದೆ. ಹೀಗೆ ಮುಂದುವರೆದರೆ ರಸ್ತೆ ಸಹ ಕೊಚ್ಚಿ ಹೋಗುವ ಸಾಧ್ಯತೆಗಳಿವೆ’ ಎಂದು ವಿಕಾಸ ನಾಯ್ಕ ಹೇಳಿದ್ದಾರೆ.

`ಈ ವರ್ಷದ ಮಳೆಗೆ ರಸ್ತೆ ಅಂಚಿನ ಮೋರಿ ಮಣ್ಣು ಪಾಲಾಗಿದೆ. ಈಗಾಗಲೇ 6 ಅಡಿ ಅಷ್ಟು ಕೊರತವಾಗಿದ್ದು, ಇನ್ನೆರಡು ಅಡಿ ಕೊರತೆ ಆದಲ್ಲಿ ರಸ್ತೆ ಕುಸಿಯಲಿದೆ. ಮಳೆ ನೀರು ಹೋಗಲು ಇಲ್ಲಿ ಗಟಾರವಿದ್ದರೂ ಗುಡ್ಡದ ನೀರು ರಸ್ತೆಗೆ ನುಗ್ಗುವುದರಿಂದ ಕೊರೆತ ಉಂಟಾಗುತ್ತಿದೆ’ ಎಂದವರು ವಿವರಿಸಿದರು.

`ರಸ್ತೆ ಉಳಿಸಿಕೊಳ್ಳಲು ಈ ಭಾಗದಲ್ಲಿ ಪಿಚ್ಚಿಂಗ್ ಕಟ್ಟುವುದು ಅನಿವಾರ್ಯ. ಹೀಗಾಗಿ ಲೋಕೋಪಯೋಗಿ ಇಲಾಖೆಯವರು ಪಿಚ್ಚಿಂಗ್ ನಿರ್ಮಿಸಬೇಕು’ ಎಂದವರು ಒತ್ತಾಯಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page