6

ಬೈಕಿನ ಸದ್ದಿಗೆ ಘರ್ಜಿಸಿದ ಚಿರತೆ!

ಹೊನ್ನಾವರ: ಚಲಿಸುತ್ತಿರುವ ಬೈಕಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಬೈಕ್ ಓಡಿಸುತ್ತಿದ್ದ ಸತ್ಯನಾರಾಯಣ ಹೆಗಡೆ ಬೈಕಿನ ವೇಗ ಹೆಚ್ಚಿಸಿ ಜೀವ ಉಳಿಸಿಕೊಂಡಿದ್ದಾರೆ.

ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದಲ್ಲಿ ಚಿರತೆ ಸಂಚಾರ ನಡೆಸಿದೆ. ಹಿರೇಮಕ್ಕಿಯ ಸತ್ಯನಾರಾಯಣ ಹೆಗಡೆ ಅವರು ಬುಧವಾರ ತಮ್ಮ ತೋಟಕ್ಕೆ ತೆರಳಿದ್ದರು. ಬೈಕಿನ ಸದ್ದು ಕೇಳಿದ ಚಿರತೆ ಬೆನ್ನಹಿಂದೆ ಬಂದಿದ್ದು, ಕನ್ನಡಿಯಲ್ಲಿ ಚಿರತೆ ನೋಡಿದ ಅವರು ಬೈಕಿನ ವೇಗ ಹೆಚ್ಚಿಸಿದರು. ಅದಾಗಿಯೂ ಚಿರತೆ ಬೈಕಿನ ಮೇಲೆ ದಾಳಿ ನಡೆಸಿತು.

ಹೆಗಡೆ ಅವರ ತೋಟದ ಬಳಿ ಚಿರತೆ ಆಕ್ರಮಣ ನಡೆಸಿದ್ದು, ಬೈಕಿನ ಸೀಟು ಚಿರತೆ ಉಗುರಿಗೆ ಸಿಕ್ಕಿ ಹರಿದಿದೆ. `ಬೈಕಿನ ವೇಗ ಹೆಚ್ಚಿಸದೇ ಅಲ್ಲಿಯೇ ನಿಂತಿದ್ದರೆ ತಮ್ಮ ಮೇಲೆಯೂ ವನ್ಯಜೀವಿ ಆಕ್ರಮಣವಾಗುತ್ತಿತ್ತು’ ಎಂದು ಸತ್ಯನಾರಾಯಣ ಹೆಗಡೆ ಆ ಕ್ಷಣದ ಆತಂಕ ಹಂಚಿಕೊoಡರು.

ಹೊನ್ನಾವರದ ಸುತ್ತಲಿನ ಪ್ರದೇಶದಲ್ಲಿ ವನ್ಯಜೀವಿ ಆಕ್ರಮಣ ಹೊಸತಲ್ಲ. ಮನೆ ಕಾವಲಿಗಿರುವ ನಾಯಿಗಳನ್ನು ಚಿರತೆ ಹೊತ್ತೊಯ್ಯುವುದು ಇಲ್ಲಿ ಸಾಮಾನ್ಯ. ಆದರೆ, ಇದೀಗ ಮಾನವನನ್ನು ಗುರಿಯಾಗಿರಿಸಿಕೊಂಡು ಚಿರತೆ ಆಕ್ರಮಣ ನಡೆಸಿದ ಬಗ್ಗೆ ಎಲ್ಲಡೆ ಆತಂಕ ವ್ಯಕ್ತವಾಗಿದೆ. `ಈ ಚಿರತೆಯನ್ನು ಬೇರೆ ಕಡೆ ಸ್ಥಳಾಂತರಿಸಬೇಕು’ ಎಂದು ಆ ಭಾಗದ ಜನ ಆಗ್ರಹಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page