6

ಸಾಕು ಪ್ರಾಣಿಯ ನಿಧನ: ಖಿನ್ನತೆಗೆ ಒಳಗಾದ ಒಡಯನ ಮರಣ!

ಮುಂಡಗೋಡ: ತಮ್ಮ ಒಡನಾಡಿಯಾಗಿದ್ದ ಎತ್ತು ಸಾವನಪ್ಪಿದ ಸಂಗತಿ ಸಹಿಸಿಕೊಳ್ಳದ ಬೀರು ಎಡಗೆ ಆ ಎತ್ತು ವಾಸವಾಗಿದ್ದ ಕೊಟ್ಟಿಗೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮುಂಡಗೋಡ ಯರಬೈಲಿನ ಬಸನಾಳದ ಬೀರು ಬಿಚ್ಚು ಎಡಗೆ (42) ಐದು ವರ್ಷದ ಹಿಂದೆ ಎರಡು ಎತ್ತುಗಳನ್ನು ಖರೀದಿಸಿದ್ದರು. ಅತ್ಯಂತ ಪ್ರೀತಿಯಿಂದ ಅವುಗಳನ್ನು ಸಾಕುತ್ತಿದ್ದರು. ಬೀರು ಎಡಗೆ ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರೂ ಎತ್ತುಗಳ ಆರೈಕೆ ವಿಷಯದಲ್ಲಿ ಕೊಂಚವೂ ಏರುಪೇರಾಗದಂತೆ ನೋಡಿಕೊಂಡಿದ್ದರು.

ಸೋಮವಾರ ಎರಡು ಎತ್ತುಗಳು ಮೇವಿಗೆ ತೆರಳಿದಾಗ ಒಂದು ಎತ್ತಿಗೆ ಹಾವು ಕಚ್ಚಿತು. ಪರಿಣಾಮ ಆ ಎತ್ತು ಸಾವನಪ್ಪಿತು. ಸಂಜೆಯಾದರು ಎತ್ತು ಮನೆಗೆ ಬಾರದ ಕಾರಣ ಹುಡುಕಾಟ ನಡೆಸಿದ ಬೀರು ಎಡಗೆಗೆ ಎತ್ತಿನ ಸಾವು ದೊಡ್ಡ ಆಘಾತ ತಂದಿತ್ತು. ಇಡೀ ದಿನ ಅದೇ ನೋವಿನಲ್ಲಿದ್ದ ಬೀರು ಎಡಗೆ ಮಂಗಳವಾರ ರಾತ್ರಿ ಆ ಎತ್ತು ವಾಸಿಸುತ್ತಿದ್ದ ಕೊಟ್ಟಿಗೆಗೆ ತೆರಳಿ ಅಲ್ಲಿ ನೇಣಿಗೆ ಶರಣಾದರು.

ಮಾಲಕ ಬೀರು ಎಡಗೆ ಅವರ ಸಾವಿನಿಂದ ಇನ್ನೊಂದು ಎತ್ತು ಸಹ ಸೊರಗಿದೆ. ಎತ್ತುಗಳನ್ನು ಅತಿಯಾಗಿ ಹಚ್ಚಿಕೊಂಡಿದ್ದ ಬೀರು ಅವರ ಆತ್ಮಹತ್ಯೆಯ ಬಗ್ಗೆ ಅವರ ಪತ್ನಿ ಭಾಗುಬಾಯಿ ಎಡಿಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page