6

ಅಕ್ರಮ ರೆಸಾರ್ಟ ವಿರುದ್ಧ ಅಧಿಕಾರಿಗಳ ಮೌನ!

`ಅಕ್ರಮ ರೆಸಾರ್ಟ ನಿರ್ಮಾಣದ ವಿರುದ್ಧ ಸಾಕಷ್ಟು ದೂರು ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ’ ಎಂದು ಕುಮಟಾದ ಈಶ್ವರ ಗೌಡ ದೂರಿದ್ದಾರೆ.

`ಕುಮಟಾ ತಾಲೂಕಿನ ನಾಡಮಾಸ್ಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನಧಿಕೃತ ರೆಸಾರ್ಟ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಅದಾಗಿಯೂ ಯಾವುದೇ ಕ್ರಮ ಜರುಗಿಸಿಲ್ಲ’ ಎಂದವರು ಆರೋಪಿಸಿದರು.

`ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ಅನಧಿಕೃತವಾಗಿ ರೆಸಾರ್ಟ್ ನಿರ್ಮಾಣ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ಮೀನುಗಾರರಿಗೆ ಇದರಿಂದ ತೊಂದರೆ ಆಗಿದೆ. ಈ ಬಗ್ಗೆ ಕಳೆದ ಸೆಪ್ಟೆಂಬರ್’ನಲ್ಲಿ ಜಿಲ್ಲಾಧಿಕಾರಿಗಳಿಗೆ ಗ್ರಾಮ ಪಂಚಾಯತ್ ಸದಸ್ಯರೆಲ್ಲ ಸೇರಿ ಮನವಿ ನೀಡಿದ್ದೇವೆ. ಜನವರಿಯಲ್ಲಿ ಕುಮಟಾ ಸಹಾಯ ಆಯಕ್ತರ ಗಮನಕ್ಕೂ ತರಲಾಗಿದೆ. ಆದರೂ, ಯಾರೂ ಕ್ರಮ ಜರುಗಿಸಲ್ಲ’ ಎಂದವರು ದೂರಿದರು.

`ಈ ರೆಸಾರ್ಟಗಳಿಗೆ ಗ್ರಾ ಪಂ ಅನುಮತಿ ಇಲ್ಲ. ಪ್ರವಾಸೋದ್ಯಮ ಇಲಾಖೆ ಪರವಾನಿಗೆಯೂ ಪಡೆದಿಲ್ಲ’ ಎಂದವರು ಉತ್ತರಿಸಿದರು. `ಈ ಭಾಗದಲ್ಲಿ 70ಕ್ಕೂ ಅಧಿಕ ರೆಸಾರ್ಟ ಅಕ್ರಮವಾಗಿದೆ. ನಾಲ್ಕು ರೆಸಾರ್ಟ ಮಾತ್ರ ಅಧಿಕೃತವಾಗಿದೆ’ ಎಂದವರು ಹೇಳಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page