6

ಗರ್ಭಿಣಿ ಗೋ ಹತ್ಯೆ ಪ್ರಕರಣ: ಕದ್ದ ಮಾಂಸ ತಿನ್ನಲ್ಲ ಎಂದ ತಜೀಂ ಅಧ್ಯಕ್ಷ!

`ಮುಸ್ಲಿಂ ಸಮುದಾಯದವರು ಗೋಮಾಂಸ ಸೇವಿಸುವುದು ಸತ್ಯ. ಆದರೆ, ಎಂದಿಗೂ ಕದ್ದ ಮಾಂಸವನ್ನು ತಿನ್ನುವುದಿಲ್ಲ’ ಎಂದು ಭಟ್ಕಳದ ತಜೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಹೇಳಿದ್ದಾರೆ.

`ಹೊನ್ನಾವರದಲ್ಲಿ ಗರ್ಭ ಧರಿಸಿದ ಗೋವನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಭಟ್ಕಳದ ಹೆಸರು ಕೇಳಿ ಬಂದಿದೆ. ಆದರೆ, ಕಳ್ಳತನದಿಂದ ಗೋ ಹತ್ಯೆ ಮಾಡಿದವರನ್ನು ಭಟ್ಕಳದವರು ಎಂದಿಗೂ ಒಪ್ಪುವುದಿಲ್ಲ’ ಎಂದವರು ಹೇಳಿದ್ದಾರೆ. `ಹೊನ್ನಾವರದಲ್ಲಿ ಹತ್ಯೆ ಮಾಡಿದ ಗೋವಿನ ಮಾಂಸವನ್ನು ಭಟ್ಕಳದಲ್ಲಿ ಮಾರಾಟ ಮಾಡಿರುವುದಕ್ಕೆ ಹಾಗೂ ತಿಂದಿರುವುದಕ್ಕೆ ನಮಗೂ ಬೇಸರವಿದೆ’ ಎಂದರು.

`ಕಳ್ಳತನ ಮಾಡಿ ಮಾಂಸ ಕೊಡುತ್ತಾರೆ ಎನ್ನುವ ಕಾರಣಕ್ಕೆ ನಾವು ಒಂದು ತಿಂಗಳು ಇಂಥ ಮಾಂಸ ಖರೀದಿಯನ್ನು ಬಂದ್ ಮಾಡಿದ್ದೇವು’ ಎಂಬ ವಿಷಯ ಬಿಚ್ಚಿಟ್ಟರು. `ದನ ಕಳ್ಳತನ ಮಾಡುವವರ ವಿರುದ್ಧ ಕಠಿಣ ಕ್ರಮವಾಗಬೇಕು’ ಎಂದು ಒತ್ತಾಯಿಸಿದರು.

ನ್ಯಾಯವಾದಿ ಇಮ್ರಾನ್ ಲಂಕಾ ಮಾತನಾಡಿ `ಅಕ್ರಮ ಗೋವಧೆ ಹಿಂದೆ ಯಾರೇ ಅಡಗಿದ್ದರು ಅವರನ್ನು ಬಂಧಿಸಬೇಕು. ಒಂದೇ ಸಮುದಾಯದವರಿಂದ ಈ ಕೆಲಸ ನಡೆಯುತ್ತಿಲ್ಲ. ಯಾರೇ ಈ ಅಕ್ರಮ ನಡೆಸಿದರೂ ನಾವು ಅದನ್ನು ಒಪ್ಪುವುದಿಲ್ಲ’ ಎಂದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page