6

ಮಹಿಳೆ ನೋವಿಗೆ ಮಿಡಿದ ಮಾಜಿ ಶಾಸಕಿಯ ಮನ!

ಕಾನ್ಸರ್ ರೋಗದಿಂದ ಬಳಲಿ ಚಿಕಿತ್ಸೆ ಪಡೆದಿರುವ ಕಮಲಾ ಹೊಕಳೆ ಅವರಿಗೆ ಮುಖ್ಯಮಂತ್ರಿ ವೈದ್ಯಕೀಯ ನಿಧಿಯಿಂದ ನೆರವು ನೀಡುವಂತೆ ಕುಮಟಾ ಮಾಜಿ ಶಾಸಕಿ ಶಾರದಾ ಶೆಟ್ಟಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಕುಮಟಾ ಹೊಲನಗದ್ದೆ ಗ್ರಾಮದ ಕಮಲಾ ಹೋಕಳೆ ಅವರು ಸ್ಥನ ಕಾನ್ಸರಿನಿಂದ ಬಳಲುತ್ತಿದ್ದರು. ಆರ್ಥಿಕವಾಗಿ ಹಿಂದುಳಿದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ರೋಗ ವಾಸಿ ಆಗುವುದಕ್ಕಾಗಿ ಲಕ್ಷಾಂತರ ರೂ ವೆಚ್ಚವಾಗಿದ್ದು, ಅದರಲ್ಲಿ ಅಲ್ಪ ಪ್ರಮಾಣದ ಹಣ ಆರೋಗ್ಯ ಕಾರ್ಡಿನ ಮೂಲಕ ಆಸ್ಪತ್ರೆಗೆ ಸಂದಾಯವಾಗಿದ್ದು, ಉಳಿದ ಹಣವನ್ನು ಸಾಲ ಮಾಡಿ ಪಾವತಿಸಿದ್ದರು.

ಸಾಲ ಮರುಪಾವತಿ ಕಾರಣಕ್ಕಾಗಿ ಅವರು ನೆರವು ಯಾಚಿಸಿ ಜ 31ರಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಬಂದರು. ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಕಮಲಾ ಹೊಕಳೆ ಅವರನ್ನು ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ಮನೆಗೆ ಕರೆದೊಯ್ದರು. ಪರಿಸ್ಥಿತಿ ಆಲಿಸಿದ ಶಾರದಾ ಶೆಟ್ಟಿ ಅವರು ಮುಖ್ಯಮಂತ್ರಿ ವೈದ್ಯಕೀಯ ನಿಧಿಗಾಗಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದರು.

`ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವಲ್ಲಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಮುಂಚೂಣಿಯಲ್ಲಿದೆ. ಬಡವರಿಗೆ ಆಹಾರದ ಕಿಟ್ ನೀಡುವ ಕಾರ್ಯವೂ ಇತರರಿಗೆ ಮಾದರಿ. ಬಡವರ ಸಮಸ್ಯೆಗಳಿಗೆ ನಾನೂ ಸದಾ ಸ್ಪಂದಿಸುವೆ’ ಎಂದು ಶಾರದಾ ಶೆಟ್ಟಿ ಅವರು ಹೇಳಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page