6

ಹಿಟಾಚಿ ಕೆಲಸ: ಕಾಮಗಾರಿ ವೀಕ್ಷಣೆಗೆ ಜನವೋ ಜನ!

ಹಲವು ಊರಿನ ಸಂಪರ್ಕ ಬೆಸೆಯುವ ಬಾಂದಾರು ಹಾಗೂ ಸೇತುವೆ ಕೆಲಸಕ್ಕೆ ಶಿರಸಿಯಲ್ಲಿ ವಿರೋಧ ವ್ಯಕ್ತವಾಗಿದೆ. ಆ ವಿರೋಧಕ್ಕೆ ವಿರೋಧ ವ್ಯಕ್ತಪಡಿಸಿದ ಹಲವು ಗ್ರಾಮೀಣ ಭಾಗದ ಜನ ಶುಕ್ರವಾರ ಕಾಮಗಾರಿ ನಡೆಯುವ ಸ್ಥಳಕ್ಕೆ ಆಗಮಿಸಿ ಕೆಲಸ ನಿಲ್ಲಿಸದಂತೆ ಹಕ್ಕೊತ್ತಾಯ ಮಾಡಿದರು.

ಶಿರಸಿ ತಾಲೂಕಿನ ಹೆಬ್ಬಲಸು ಬಳಿ ಬಾಂದಾರು ಹಾಗೂ ಸೇತುವೆ ನಿರ್ಮಾಣ ಕೆಲಸ ನಡೆಯುತ್ತಿದೆ. 2022ರಲ್ಲಿ ಈ ಕಾಮಗಾರಿಗಾಗಿ 2 ಕೋಟಿ ರೂ ಮಂಜೂರಿಯಾಗಿತ್ತು. ಇದೀಗ ಕೆಲಸ ಶುರುವಾಗಿದ್ದು, ವಿರೋಧಿಗಳ ಒತ್ತಡಕ್ಕೆ ಮಣಿಯದೇ ಕೆಲಸ ಮುಂದುವರೆಸಬೇಕು ಎಂದು ಆ ಭಾಗದ ಜನ ಆಗ್ರಹಿಸಿದ್ದಾರೆ.

ಈ ಕಾಮಗಾರಿಯೂ ನೆಗ್ಗು ಗ್ರಾಮ ಪಂಚಾಯಿತಿ ಹಾಗೂ ಜಾನ್ಮನೆ ಗ್ರಾಮ ಪಂಚಾಯಿತಿಯನ್ನು ಜೋಡಿಸುತ್ತದೆ. ಸದ್ಯ ನೆಬ್ಬೂರು, ರೇವಣಕಟ್ಟಾ ಭಾಗದ ಜನ ಹೇರೂರು ರಸ್ತೆ ಸಂಪರ್ಕ ಪಡೆಯಲು ಅಮ್ಮಿನಳ್ಳಿ, ಕೊಳಗಿಬೀಸ್ ಮೂಲಕ ತೆರಳುತ್ತಿದ್ದು, ಇಲ್ಲಿ ಸೇತುವೆ ನಿರ್ಮಾಣವಾದ ನಂತರ 10ಕಿಮೀ ದೂರದ ಪ್ರಯಾಣ ಕಡಿಮೆಯಾಗಲಿದೆ.

`ಈ ಭಾಗದ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯವೂ ಸಿಗಲಿದೆ. ಕೃಷಿ ಭೂಮಿಗೆ ಈ ಯೋಜನೆಯಿಂದ ಯಾವುದೇ ಸಮಸ್ಯೆ ಇಲ್ಲ. ನೆಬ್ಬೂರು ಭಾಗದ ವಿದ್ಯಾರ್ಥಿಗಳಿಗೂ ಕೊಳಗಿಬೀಸ್ ಕಾಲೇಜುಮ ತಟ್ಟಿಕೈ ಪ್ರೌಢಶಾಲೆ ಈ ಸೇತುವೆಯಿಂದ ಸನೀಹ’ ಎಂದು ನೆಗ್ಗು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿನಾಯಕ ಹೆಗಡೆ ಹೆಬ್ಬಲಸು ವಿವರಿಸಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page