6

ಫ್ಲೈ ಓವರ್’ಗೆ ಗುದ್ದಿದ ಕಾರು: ಗುತ್ತಿಗೆದಾರನಿಂದ ದೂರು!

ಜಿಲ್ಲಾಧಿಕಾರಿ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತವಾಗಿದೆ.  ಫ್ಲೈ ಓವರ್ ಕಂಬಕ್ಕೆ ಕಾರು ಗುದ್ದಿದ ಪರಿಣಾಮ ಕಾರಿನ ಚಾಲಕ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.

ಕಾರವಾರ ಕಾಜುಭಾಗ ಬಳಿಯ ಕೆಂಚಾ ರಸ್ತೆಯ ಲಕ್ಷ್ಮೀಶ ಕಳಸ (27) ಜನವರಿ 30ರ ರಾತ್ರಿ ಕಾರು ಓಡಿಸುತ್ತಿದ್ದರು. ಕೋಡಿಭಾಗ ಕಡೆಯಿಂದ ಹೊರಟ ಅವರು ಸರ್ವೀಸ್ ರಸ್ತೆಯಲ್ಲಿ ಕಾರವಾರ ಕಡೆಗೆ ತೆರಳುತ್ತಿದ್ದರು. ಆಗ, ಏಕಾಏಕಿ ಆಕಳೊಂದು ಅವರ ಕಾರಿಗೆ ಅಡ್ಡ ಬಂದಿದ್ದು ಅದನ್ನು ತಪ್ಪಿಸುವ ಭರದಲ್ಲಿ ಫ್ಲೈ ಓವರ್ ಕಂಬಕ್ಕೆ ಕಾರು ಗುದ್ದಿದರು.

ಕಾರಿನ ವೇಗ ಹೆಚ್ಚಿದ್ದ ಕಾರಣ ವಾಹನದ ಮುಂಬಾಗ ಜಖಂ ಆಯಿತು. ಜೊತೆಗೆ ಕಾರು ಚಲಾಯಿಸುತ್ತಿದ್ದ ಲಕ್ಷ್ಮೀಶ ಕಳಸ ಅವರ ತಲೆಗೂ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ತಲೆ ಎಡಭಾಗಕ್ಕೆ ನೋವು ಮಾಡಿಕೊಂಡ ಲಕ್ಷ್ಮೀಶ ಕಳಸ ಮೂಗಿನಿಂದ ರಕ್ತ ಸುರಿದ ಕಾರಣ ಆಸ್ಪತ್ರೆ ಸೇರಿದರು. ಅಪಘಾತದ ಬಗ್ಗೆ ಬಾಡ ನಂದನಗದ್ದಾ ಐಟಿಐ ಕಾಲೇಜು ಬಳಿಯ ಗುತ್ತಿಗೆದಾರ ಗಜೇಂದ್ರ ಬಿಣಗೇಕರ್ ಪೊಲೀಸರಿಗೆ ದೂರು ನೀಡಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page