6

ನಾಯಿ ಬದುಕಿಸಿ ಜೀವ ತ್ಯಜಿಸಿದ ಮಹೇಶ!

ರಸ್ತೆಯಲ್ಲಿ ಅಡ್ಡಾಡುತ್ತಿದ್ದ ನಾಯಿ ಬೈಕಿಗೆ ಅಡ್ಡ ಬಂದ ಪರಿಣಾಮ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಮಹೇಶ ನಾಯ್ಕ ಕರೆಂಟ್ ಕಂಬಕ್ಕೆ ಬೈಕ್ ಗುದ್ದಿ ಸಾವನಪ್ಪಿದ್ದಾರೆ.

ಕುಮಟಾ ತಾಲೂಕಿನ ಕೂಜಳ್ಳಿಯ ಮಹೇಶ ನಾಯ್ಕ (50) ಅವರು ಹೊನ್ನಾವರದ ಚಂದಾವರ ಬಳಿಯ ಮುಂಡಿಗೆಜಡ್ಡಿ ಬಳಿ ವಾಸವಾಗಿದ್ದರು. ಅಲ್ಲಿ ಅವರು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಫೆ 3ರಂದು ಚಂದಾವರದಿAದ ಹೊನ್ನಾವರ ಕಡೆ ಅವರು ಬೈಕ್ ಓಡಿಸುತ್ತಿದ್ದರು.

ಹೆಬ್ಬಾನಕೇರಿ ಉಪ್ಪಳೆ ಕ್ರಾಸಿನ ಬಳಿ ಅವರ ಬೈಕಿಗೆ ನಾಯಿಯೊಂದು ಅಡ್ಡ ಬಂದಿತು. ಬೈಕು ವೇಗವಾಗಿ ಚಲಿಸುತ್ತಿದ್ದು, ನಾಯಿಗೆ ಬೈಕ್ ಗುದ್ದುವುದನ್ನು ಅವರು ತಪ್ಪಿಸಿದರು. ಆದರೆ, ಆ ಬೈಕು ಎದುರಿಗಿದ್ದ ಕರೆಂಟ್ ಕಂಬಕ್ಕೆ ಜೋರಾಗಿ ಡಿಕ್ಕಿಯಾಯಿತು.

ಪರಿಣಾಮ ಮಹೇಶ ನಾಯ್ಕ ಅವರು ಗಂಭೀರ ಪ್ರಮಾಣದಲ್ಲಿ ಗಾಯ ಮಾಡಿಕೊಂಡರು. ಅವರನ್ನು ಸ್ಥಳೀಯರು ಹೊನ್ನಾವರ ಆಸ್ಪತ್ರೆಗೆ ದಾಖಲಿಸಿದರು. ಕುಟುಂಬದವರು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಕಡೆ ಕರೆದೊಯ್ದರು. ಆದರೆ, ಕಾಸರಕೋಡು ಬಳಿ ಮಹೇಶ ನಾಯ್ಕ ಉಸಿರಾಟ ನಿಲ್ಲಿಸಿದರು.

ಕೂಜಳ್ಳಿಯ ವಿನಾಯಕ ನಾಯ್ಕ ಈ ಬಗ್ಗೆ ಹೊನ್ನಾವರ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page