6

ASI ಮನೆಯಲ್ಲಿತ್ತು 18 ಲಕ್ಷದ ಚಿನ್ನ: ಕನ್ನ ಹಾಕಿದ ಟೋಪಿವಾಲ ಡುಮ್ಮಣ್ಣ!

ಬೆಲೆ ಬಾಳುವ ವಸ್ತುಗಳನ್ನು ಜೋಪಾನವಾಗಿರಿಸಿಕೊಳ್ಳಲು ಬ್ಯಾಂಕ್ ಲಾಕರ್ ಸೌಲಭ್ಯವಿದ್ದರೂ ಅದನ್ನು ಬಳಸಿಕೊಳ್ಳದ ಮಹಿಳಾ ಪೊಲೀಸ್ ಅಧಿಕಾರಿ ಇದೀಗ ಪಶ್ಚಾತಾಪ ಪಡುತ್ತಿದ್ದಾರೆ. ಅವರ ಮನೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳರು ಅಪಹರಿಸಿದ್ದಾರೆ.

ಕಾರವಾರದ ಖುರ್ಸಾವಾಡದ ಬಳಿ ವಾಸವಾಗಿರುವ ಸ್ಮಿತಾ ಪಾವಸ್ಕರ್ ಅವರು ಪೊಲೀಸ್ ಅಧೀಕ್ಷಕರ ಕಚೇರಿಯ ಡಿಸಿಆರ್‌ಬಿ ವಿಭಾಗದಲ್ಲಿ ಎಎಸ್‌ಐ ಆಗಿದ್ದಾರೆ. ಜನವರಿ 1ರ ಬೆಳಗ್ಗೆಯಿಂದ ಜನವರಿ 2ರ ಸಂಜೆಯವರೆಗೂ ಅವರು ಮನೆಯಲ್ಲಿರಲಿಲ್ಲ. ಇದನ್ನು ಗಮನಿಸಿ ಹೊಂಚು ಹಾಕಿದ ಕಳ್ಳರು ಮನೆಯ ಬೀಗ ಮುರಿದಿದ್ದಾರೆ. ಇಂಟರ್ ಲಾಕ್ ಒಡೆದು, ಬೆಡ್ ರೂಮಿನಲ್ಲಿದ್ದ ಟ್ರಜರಿಯನ್ನು ಮುರಿದು ಅಲ್ಲಿದ್ದ ಒಡವೆಗಳನ್ನು ಅಪಹರಿಸಿದ್ದಾರೆ.

ಸಂಜೆ ಮನೆಗೆ ಬಂದು ನೋಡಿದ ಸ್ಮಿತಾ ಪಾವಸ್ಕರ್ ಅವರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕೂಲಂಕುಷವಾಗಿ ಪರಿಶೀಲಿಸಿದಾಗ ಮನೆಯಲ್ಲಿದ್ದ 18.85 ಲಕ್ಷ ರೂ ಮೌಲ್ಯದ 37 ಗ್ರಾಂ ಬಂಗಾರದ ಆಭರಣ, 72 ಗ್ರಾಂ ತೂಕದ ಬೆಳ್ಳಿ ಸಾಮಗ್ರಿ ಹಾಗೂ 10 ಸಾವಿರ ರೂ ಹಣವೂ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಕಾರವಾರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ವಿಷಯ ಅರಿತ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸಿಸಿ ಕ್ಯಾಮರಾ ದಾಖಲೆಗಳನ್ನು ಪರಿಶೀಲಿಸಿದಾಗ ಅಪರಿಚಿತ ದಡೂತಿ ದೇಹದ ವ್ಯಕ್ತಿಯೊಬ್ಬ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಆತ ಮಾಸ್ಕ್ ಧರಿಸಿ ಟೋಪಿ ಹಾಕಿಕೊಂಡಿದ್ದರಿAದ ಮುಖ ಕಾಣಿಸುತ್ತಿಲ್ಲ.

ಅದಾಗಿಯೂ ಪೊಲೀಸರು ಆತನ ಹುಡುಕಾಟದಲ್ಲಿದ್ದಾರೆ. ಚಿತ್ರದಲ್ಲಿರುವ ಕಳ್ಳನನ್ನು ಕಂಡರೆ ಇಲ್ಲಿ ಫೋನ್ ಮಾಡಿ: 9480805220 ಅಥವಾ 9480805290

  • Related Posts

    ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ

    Share this… Facebook Pinterest Twitter Linkedin Whatsappಹಾವೇರಿ: ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಮೋಹನ ಲಿಂಬಿಕಾಯಿ ಅವರ ಪರವಾಗಿ ಕಾಂಗ್ರೆಸ್ ಮುಖಂಡರು ಹಾಗೂ ಪದವೀಧರ ಘಟಕದ ಪದಾಧಿಕಾರಿಗಳು ಹಾವೇರಿ ನಗರದ ಪ್ರತಿಷ್ಠಿತ ಹುಕ್ಕೇರಿಮಠ ಪದವಿಪೂರ್ವ ಹಾಗೂ ಪದವಿ…

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    You cannot copy content of this page