6

ಗೋಗರ್ಭ ಗುಹೆಗೆ ಬೆಂಕಿ: ಉಪಟಳ ನೀಡಿದ ಸಿಗರೇಟಿನ ಕಿಡಿ!

ಪ್ರವಾಸಿಗರು ಸೇದಿ ಬಿಸಾಡಿದ ಸಿಗರೇಟಿನ ತುಂಡು ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಕುಮಟಾ ತಾಲೂಕಿನ ಗೋಕರ್ಣದ ಗೋಗರ್ಭದ ಬಳಿ ಭಾನುವಾರ ಬೆಂಕಿ ಹೊತ್ತಿ ಉರುಯುತ್ತಿರುವುದನ್ನು ನೋಡಿದ ಜನ ಅದನ್ನು ಆರಿಸುವ ಪ್ರಯತ್ನ ಮಾಡಿದ್ದಾರೆ.

ಸಾರ್ವಜನಿಕ ಪ್ರದೇಶಗಳಲ್ಲಿ ಬೀಡಿ-ಸಿಗರೇಟು ಸೇದುವುದು ಅಪರಾಧ ಎಂಬ ಅರಿವಿದ್ದರೂ ಪ್ರವಾಸಿಗರು ಗುಡ್ಡದ ತಪ್ಪಲಿನಲ್ಲಿ ರಾಜಾರೋಷವಾಗಿ ಮಾದಕ ವ್ಯಸನದಲ್ಲಿ ತೊಡಗುತ್ತಾರೆ. ಅದರಂತೆ ಭಾನುವಾರ ಪ್ರವಾಸಕ್ಕೆ ಬಂದವರು ಸಿಗರೇಟು ಸೇದಿ ಬಿಸಾಡಿದ ಪರಿಣಾಮ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ. ಗಂಟೆಗಳ ಕಾಲ ಹರಸಾಹಸ ಪಟ್ಟರೂ ಬೆಂಕಿ ಆರಿಸಲು ಸಾಧ್ಯವಾಗಿಲ್ಲ.

ಕುಡ್ಲೆ ಕಡಲತೀರಕ್ಕೆ ಸಾಗುವ ಮಾರ್ಗದಲ್ಲಿ ಈ ಅಗ್ನಿ ಅವಘಡ ನಡೆದಿದೆ. ಖಾಸಗಿಯವರ ಜಾಗದಲ್ಲಿ ಹೆಚ್ಚಿನ ಬೆಂಕಿ ಹೊತ್ತಿಕೊಂಡಿದ್ದು, ಅದರು ಅರಣ್ಯ ಇಲಾಖೆ ಭೂಮಿಗೂ ವ್ಯಾಪಿಸಿದೆ. ಈ ಹಿನ್ನಲೆ ಅರಣ್ಯ ಸಿಬ್ಬಂದಿ ಸಹ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದರು. ಕೊನೆಗೆ ಎಲ್ಲರೂ ಸೇರಿ ಬೆಂಕಿ ಹತೋಟಿಗೆ ತಂದರು.

ಬೆoಕಿ ಕಂಡ ಜನ ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದ್ದರು. ಕುಮಟಾದಿಂದ ಅಗ್ನಿಶಾಮಕ ವಾಹನ ಆಗಮಿಸುವ ವೇಳೆಗೆ ಅಲ್ಲಿದ್ದವರೇ ಬೆಂಕಿ ಆರಿಸಿದ್ದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page