6

ವೃದ್ಧನಿಗೆ ಕಾಡಿದ ನಾಲಿಗೆ ಕಾನ್ಸರ್: ನೋವು ಸಹಿಸದೇ ನೇಣಿಗೆ ಶರಣು!

ನಾಲಿಗೆ ಕಾನ್ಸರ್’ನಿಂದ ಬಳಲುತ್ತಿದ್ದ ಗಣಪತಿ ನಾಯ್ಕ ಅವರು ತಮ್ಮ 76ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶಿರಸಿ ತಾಲೂಕಿನ ಉಂಚಳ್ಳಿ ಉಪಳೆಕೊಪ್ಪದಲ್ಲಿ ಗಣಪತಿ ನಾಯ್ಕ ಅವರು ವಾಸವಾಗಿದ್ದರು. ಕೃಷಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ಈಚೆಗೆ ಅವರಿಗೆ ನಾಲಿಗೆ ಕಾನ್ಸರ್ ಆಗಿರುವುದು ಅರಿವಿಗೆ ಬಂದಿತು. ಇದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಸಹ ಒಳಗಾಗಿದ್ದರು.

ಆದರೆ, ಚಿಕಿತ್ಸೆ ನಂತರ ಗಣಪತಿ ನಾಯ್ಕ ಅವರು ಇನ್ನಷ್ಟು ಸಮಸ್ಯೆಗೆ ಸಿಲುಕಿದರು. ಅನಾರೋಗ್ಯ ವ್ಯಾಪಕ ಪ್ರಮಾಣದಲ್ಲಿ ಅವರನ್ನು ಕಾಡಿತು. ಆ ನೋವಿನಿಂದ ಹೊರಬರುವುದಕ್ಕಾಗಿ ಮದ್ಯ ಸೇವನೆ ಶುರು ಮಾಡಿದರು. ಸರಾಯಿ ಚಟ ಸಹ ವ್ಯಾಪಕವಾಗಿ ಬೆಳೆದುಕೊಂಡಿದ್ದು, ಅವರ ಕುಟುಂಬದವರಿoದಲೂ ಅದನ್ನು ಬಿಡಿಸಲು ಸಾಧ್ಯವಾಗಲಿಲ್ಲ.

ಈ ನಡುವೆ ಫೆ ಫೆ 9ರಂದು ಮನೆಯಿಂದ ಹೊರ ಹೋದ ಅವರು ಮಧ್ಯಾಹ್ನವಾದರೂ ಮನೆಗೆ ಮರಳಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದ ನಂತರ ಮನೆ ಹಿಂದಿನ ಕಾಡಿನಲ್ಲಿ ಅವರು ನೇಣಿಗೆ ಶರಣಾಗಿದ್ದರು. ಇದನ್ನು ನೋಡಿದ ಅವರ ಪುತ್ರ ಮಹೇಶ ನಾಯ್ಕ ನೇತಾಡುತ್ತಿದ್ದ ದೇಹವನ್ನು ಕೆಳಗಿಳಿಸಿ ಶಿರಸಿಯ ಪಿಜಿ ಆಸ್ಪತ್ರೆಗೆ ತಂದರು. ಪರೀಕ್ಷಿಸಿದ ವೈದ್ಯರು ಗಣಪತಿ ನಾಯ್ಕ ಸಾವನಪ್ಪಿರುವುದಾಗಿ ಘೋಷಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page