6

ನಾಯಿ ಕಾಟಕ್ಕೆ ದವಡೆ ಮುರಿದುಕೊಂಡ ಬೈಕ್ ಸವಾರ!

ರಾತ್ರಿ ವೇಳೆ ಬೈಕಿನಲ್ಲಿ ಸಂಚರಿಸುತ್ತಿದ್ದ ಅಮಿತ್ ನಾಯ್ಕ ಅವರಿಗೆ ನಾಯಿ ಬೆದರಿಸಿದ ಕಾರಣ ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

ಕಾರವಾರದ ಸಂಕ್ರಿವಾಡದ ಅಮಿತ್ ನಾಯ್ಕ (31) ಖಾಸಗಿ ಕಂಪನಿ ಉದ್ಯೋಗಿ. ಫೆ 10ರ ನಸುಕಿನ 12.30ರ ಆಸುಪಾಸಿನಲ್ಲಿ ಅವರು ಸಂಕ್ರಿವಾಡ ಕಡೆ ಬೈಕಿನಲ್ಲಿ ಹೋಗುತ್ತಿದ್ದರು. ಸಂಕ್ರಿವಾಡ 2ನೇ ಕ್ರಾಸಿನಲ್ಲಿ ಅವರ ಬೈಕಿಗೆ ಬೀದಿ ನಾಯಿ ಅಡ್ಡ ಬಂದಿತು. ನಾಯಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅವರಿಗೆ ಬೈಕಿನ ಮೇಲಿದ್ದ ನಿಯಂತ್ರಣ ತಪ್ಪಿತು.

ಪರಿಣಾಮ ಬೈಕಿನ ಜೊತೆ ನೆಲಕ್ಕೆ ಅಪ್ಪಳಿಸಿದ ಅಮೀತ ನಾಯ್ಕ ಅವರು ರಸ್ತೆಗೆ ಮೈ ತಿಕ್ಕುತ್ತ ಮುಂದೆ ಹೋದರು. ಬೈಕು ಅಲ್ಲಿದ್ದ ಕಪೌಂಡಿಗೆ ಗುದ್ದಿದಾಗ ಅಲ್ಲಿಯೇ ಅಮಿತ್ ನಾಯ್ಕ ಸಹ ಬಿದ್ದರು. ಈ ಅಪಘಾತದ ರಭಸಕ್ಕೆ ಅಮೀತ ನಾಯ್ಕ ಅವರ ದವಡೆ ಹಾಗೂ ಮೂಗಿನ ಮೂಳೆ ಮುರಿದಿದೆ. ಮೈ-ಕೈಗಳಿಗೂ ಅಲ್ಲಲ್ಲಿ ಗಾಯವಾಗಿದೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಅಪಘಾತದ ಬಗ್ಗೆ ಹೆಸ್ಕಾಂ ಉದ್ಯೋಗಿ ಅಂಕಿತ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page