6

ದೂರು ನೀಡಿದರೂ ಆಗಿಲ್ಲ ಕಠಿಣ ಕ್ರಮ: ಅರಣ್ಯಾಧಿಕಾರಿಯ ಅದೃಷ್ಠ ಬದಲಿಸಿದ ಅಕ್ರಮ!

ಮುಂಡಗೋಡಿನ ಕಾತೂರು ಅರಣ್ಯ ವಲಯದಲ್ಲಿ ಅಕ್ರಮ ನಡೆದಿದೆ. ಅತಿಕ್ರಮಣ ತಡೆಗೆ ಬೇಲಿ ನಿರ್ಮಾಣ ವಿಷಯದಲ್ಲಿ ಅಪರಾತಪರವಾಗಿದೆ.

`ಕಾತೂರು ವಲಯದ ಹಲವೆಡೆ 4 ಕೋಟಿ ರೂ ವೆಚ್ಚದಲ್ಲಿ ಕಬ್ಬಿಣದ ಕಂಬದೊAದಿಗೆ ಬೇಲಿ ನಿರ್ಮಿಸಲಾಗಿತ್ತು. ಆದರೆ, ಇದೀಗ ಆ ಬೇಲಿ ಮುರಿದು ಅಲ್ಲಿ ಕಪೌಂಡ್ ನಿರ್ಮಿಸಲಾಗಿದೆ. ದಾಖಲೆಗಳ ಪ್ರಕಾರ 5 ಅಡಿ ಎತ್ತರ, 5 ಹಲಗೆ ಎಂದು ನಮೂದಾಗಿದ್ದು, ಸ್ಥಳದಲ್ಲಿ 3 ಹಲಿಗೆಗಳನ್ನು ಮಾತ್ರ ಅಳವಡಿಸಲಾಗಿದೆ’ ಎಂಬುದು ಹನುಮಂತ ವಡ್ಡರ ಅವರ ದೂರು.

`ಈ ಹಿಂದೆ ನಿರ್ಮಿಸಿದ ಬೇಲಿಯನ್ನು ನಿರ್ಲಕ್ಷಿಸಿ ಹೊಸ ಕಪೌಂಡ್ ನಿರ್ಮಾಣ ಅಗತ್ಯವಿರಲಿಲ್ಲ. ಆ ಬೇಲಿಯನ್ನೂ ಸರಿಯಾಗಿ ನಿರ್ವಹಣೆ ಮಾಡದೇ ಅಲ್ಲಿಯೇ ಕಪೌಂಡ್ ನಿರ್ಮಾಣ ಹೆಸರಿನಲ್ಲಿ ಹಣ ವೆಚ್ಚ ಮಾಡಲಾಗಿದೆ. ಸಿಮೆಂಟ್ ಕಂಬಗಳೊoದಿಗೆ 4 ಲೈನ್ ತಂತಿ ಬೇಲಿ ನಿರ್ಮಿಸಿದ್ದು, ಸಿಮೆಂಟ್ ಗೋಡೆ ಸಹ ಕಳಪೆಯಾಗಿದೆ’ ಎಂದವರು ವಿವರಿಸಿದ್ದಾರೆ.

`ಇಲ್ಲಿನ ಸಾಕಷ್ಟು ಅಕ್ರಮಗಳ ಬಗ್ಗೆ ಸರ್ಕಾರಕ್ಕೆ ದೂರು ಕೊಡಲಾಗಿದೆ. ಆದರೆ, ಈವರೆಗೂ ಯಾವುದೇ ಕ್ರಮವಾಗಿಲ್ಲ. ಹಿರಿಯ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಬೇಕು’ ಎಂದು ಹನುಮಂತ ವಡ್ಡರ ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page