6

ಸತ್ತರೂ ಸ್ವರ್ಗ ಸೇರದ ಹಸು!

ಪುಣ್ಯಕೋಟಿ ಎಂದು ಪೂಜಿಸುವ ಹಸು ಸಾವನಪ್ಪಿದ ನಂತರ ಅದನ್ನು ಟಾಕ್ಟರಿಗೆ ಕಟ್ಟಿ ಎಳೆದೊಯ್ದ ವಿಡಿಯೋ ವೈರಲ್ ಆಗಿದೆ. ಹಿಂದು ಧರ್ಮಿಯರ ಭಾವನೆಗೆ ದಕ್ಕೆಯಾದ ಹಿನ್ನಲೆ ದಾಂಡೇಲಿ ಪೊಲೀಸರು ಟಾಕ್ಟರ್’ಗೆ ಹಸು ಕಟ್ಟಿ ಎಳೆದೊಯ್ದ ವ್ಯಕ್ತಿಯ ವಿಚಾರಣೆ ನಡೆಸಿದ್ದಾರೆ.

ದಾಂಡೇಲಿ ಕೋಗಿಲಬನದಲ್ಲಿ ಆಕಳೊಂದು ಸಾವನಪ್ಪಿದ್ದು, ಅದನ್ನು ಮಣ್ಣು ಮಾಡುವ ಮುನ್ನ ಟಾಕ್ಟರ್’ಗೆ ಕಟ್ಟಿ ಎಳೆಯಲಾಗಿದೆ. ಇದನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದು, ಆ ವಿಡಿಯೋ ಎಲ್ಲಡೆ ವೈರಲ್ ಆಗಿದೆ. ವಿಡಿಯೋ ನೋಡಿದ ಅನೇಕರು ಸಾವನಪ್ಪಿದ ಹಸುವಿನ ಬಗ್ಗೆ ಕನಿಕರದ ಮಾತುಗಳನ್ನಾಡಿದ್ದಾರೆ.

ಹಿಂದು ಧರ್ಮದ ಪ್ರಕಾರ ಹಸು ಸಾವನಪ್ಪಿದ ನಂತರವೂ ಅದರ ಸಂಸ್ಕಾರವನ್ನು ಶೃದ್ಧೆಯಿಂದ ಮಾಡಲಾಗುತ್ತದೆ. ಈ ರೀತಿ ಹಸುವನ್ನು ಎಳೆದೊಯ್ದು ಅವಮಾನ ಮಾಡಿದ್ದರಿಂದ ಧಾರ್ಮಿಕ ಭಾವನೆಗೆ ದಕ್ಕೆಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

ಈ ಹಿನ್ನಲೆ ಪೊಲೀಸರು ಕೃತ್ಯವೆಸಗಿದ ಅಷ್ಪಾಕ್ ರಹಿಮುಲ್ಲಾ ಶೇಖ ಮತ್ತು ಸಾಧಿಕ ದಸ್ತಗೀರ ಮುಲ್ಲಾ ಎಂಬಾತರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಮುಂದುವರೆದಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page