6

ಮಂಕಿಯಲ್ಲಿ ಮಂಗನಾಟ: ಶಿಲ್ಪಿ ಜೊತೆ ಹೊಡೆದಾಟ!

ಹೊನ್ನಾವರದ ಶಿಲ್ಪಿ ಗಣೇಶ ನಾಯ್ಕ ಅವರ ಮೇಲೆ ದಾಳಿ ನಡೆದಿದೆ. 5ಕ್ಕೂ ಅಧಿಕ ಜನ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ.

ಹೊನ್ನಾವರದ ಮಂಕಿ ಬಳಿಯ ಬಣಸಾಲೆಯಲ್ಲಿ ಗಣೇಶ ನಾಯ್ಕ ಅವರು ಶಿಲ್ಪ ಕೆತ್ತನೆ ಮಾಡಿಕೊಂಡಿದ್ದಾರೆ. ಮೇ 19ರ ರಾತ್ರಿ ಮುರುಡೇಶ್ವರದ ಶಬರೀಶ ಮಂಜುನಾಥ ನಾಯ್ಕ ಎಂಬಾತರು ಗಣೇಶ ನಾಯ್ಕ ಅವರನ್ನು ಮಂಕಿಗೆ ಕರೆದಿದ್ದರು. ಅಲ್ಲಿ ಹೋದಾಗ ಮಂಕಿಅರೆಯ ರಿಕ್ಷಾ ನಿಲ್ದಾಣದ ಬಳಿ ಎಂಟು ಜನ ಸೇರಿ ಅವರ ಮೇಲೆ ಆಕ್ರಮಣ ನಡೆಸಿದರು.

ಟವೇರಾ ವಾಹನದಲ್ಲಿ ಬಂದ ಮುರುಡೇಶ್ವರದ ಶಬರೀಶ ಮಂಜುನಾಥ ನಾಯ್ಕ, ಯೋಗೇಶ ನಾಗಪ್ಪ ನಾಯ್ಕ, ಬಾಬು ಕಾಳಿಂಗ ನಾಯ್ಕ ಸೇರಿ ಈ ದಾಳಿ ನಡೆಸಿದ್ದಾರೆ. ಶಬರೀಶ ಈಶ್ವರ ನಾಯ್ಕ, ಉಮೇಶ ಜಟ್ಟಪ್ಪ ನಾಯ್ಕ ಹಾಗೂ ಮತ್ತೆ ಮೂವರು ಸೇರಿ ಕೈ ಕೈ ಮಿಲಾಯಿಸಿದ್ದಾರೆ.

ಈ ಎಲ್ಲರೂ ಸೇರಿ ಹಿಗ್ಗಾಮುಗ್ಗ ಥಳಿಸಿದ್ದರಿಂದ ಗಣೇಶ ನಾಯ್ಕರು ಗಾಯಗೊಂಡರು. ಅಲ್ಲಿದ್ದ ಜನ ಆಗಮಿಸಿ ಹೊಡೆದಾಟ ತಪ್ಪಿಸಿದರು. ನೋವಿನಿಂದ ಬಳಲಿದ ಗಣೇಶ ನಾಯ್ಕರು ಮಂಕಿ ಪೊಲೀಸ್ ಠಾಣೆಗೆ ತೆರಳಿ ಹೊಡೆದವರ ಹೆಸರು ಹೇಳಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹೊಡೆದಾಟದ ಕಾರಣ ಹುಡುಕುತ್ತಿದ್ದಾರೆ

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page