6

ರಾಣಿ ನಿವಾಸಕ್ಕೆ ಸಂಸದರ ಭೇಟಿ: ಅಧ್ಯಯನ!

ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಗಳವಾರ ಸಂಜೆ ಇಂದೂರಿನ ರಾಣಿಯ ಐತಿಹ್ಯದ ಬಗ್ಗೆ ಅಭ್ಯಯಿಸಿದರು.

ಮಧ್ಯಪ್ರದೇಶದ ಇಂದೋರ್’ನಲ್ಲಿ ಮಾಲ್ವಾ ಸಾಮ್ರಾಜ್ಯದ ರಾಣಿಯಾಗಿ ಮೆರೆದ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಈ ರಾಣಿಗಾಗಿಯೇ ಇಲ್ಲಿ ದೇವಾಲಯವಿದ್ದು ಅನೇಕ ಭಕ್ತರು ಆಗಮಿಸಿ ಸೇವೆ ಸಲ್ಲಿಸುತ್ತಾರೆ.

ಮಂಗಳವಾರ ಸಂಜೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಲ್ಲಿಗೆ ಭೇಟಿ ನೀಡಿದರು. ಹಿಂದೂ ದೇವಾಲಯಗಳ ರಕ್ಷಣೆ ಹಾಗೂ ಜೀರ್ಣೋದ್ಧಾರದಲ್ಲಿ ಅಹಲ್ಯಾಬಾಯಿ ಅವರ ಕೊಡುಗೆಯ ಬಗ್ಗೆ ಅವರು ನೆನಪಿಸಿಕೊಂಡರು.

ರಥಬೀದಿಯಲ್ಲಿರುವ ಅಹಲ್ಯಾಬಾಯಿ ಹೊಳ್ಕರ್ ಛತ್ರಕ್ಕೆ ಭೇಟಿ ನೀಡಿದ ಅವರು ಅಲ್ಲಿ ರಾಜಮಾತೆ ಪ್ರತಿಷ್ಟಾಪಿಸಿದ ರವಳೇಶ್ವರ ದೇವರ ದರ್ಶನ ಮಾಡಿದರು. ಅಹಲ್ಯಾಬಾಯಿಯವರು ಅಂದಿನ ಕಾಲದಲ್ಲಿ ದೇವಾಲಯಗಳ ರಕ್ಷಣೆ ಹಾಗೂ ಅಭಿವೃದ್ದಿಗೆ ಕೈಗೊಂಡ ದಿಟ್ಟಕ್ರಮದ ನೆನಪಿಗಾಗಿ ತ್ರಿಜನ್ಮಶತಮಾನೋತ್ಸವದ ಅಂಗವಾಗಿ ಎಲ್ಲಡೆ ಕಾರ್ಯಕ್ರಮ ನಡೆಯುತ್ತಿದೆ. ಇದರ ಅಂಗವಾಗಿ ಸಂಸದರು ಇಲ್ಲಿಗೆ ಭೇಟಿ ನೀಡಿದರು.

ಇದನ್ನೂ ಓದಿ: ಇಂದೋರು ರಾಣಿಗೆ ಇಲ್ಲಿ ನಿತ್ಯ ಪೂಜೆ!

ಈ ಛತ್ರ ನಿರ್ವಹಿಸುವ ರಾಜು ಬುಗದೆ ಅವರು ಇಲ್ಲಿ ನಿತ್ಯ ದೇವರ ಜೊತೆ ರಾಣಿಯನ್ನ ಆರಾಧಿಸುತ್ತಿರುವ ವಿಧಾನ ಹಾಗೂ ವಿಶೇಷತೆಗಳ ಬಗ್ಗೆ ವಿವರಿಸಿದರು. ಪ್ರಮುಖರಾದ ಮಂಜುನಾಥ ಜನ್ನು ಜೊತೆಯಿದ್ದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page