6

ಪೊಲೀಸರ ಕೆಲಸ ಮಾಡಿದ ಕಾಲೇಜು ಪ್ರಾಚಾರ್ಯ!

ಸಂಚಾರಿ ನಿಯಮ ಉಲ್ಲಂಘಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಯಲ್ಲಾಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಆರ್ ಡಿ ಜನಾರ್ಧನ್ ಬಿಸಿ ಮುಟ್ಟಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ ಮಕ್ಕಳಿಗೆ ಅರಿವು ಮೂಡಿಸಿ, ಮತ್ತೆ ತಪ್ಪು ಮಾಡಿದರೆ ಪೊಲೀಸರನ್ನು ಕಾಲೇಜಿಗೆ ಕರೆಯಿಸುವುದಾಗಿ ಎಚ್ಚರಿಸಿದ್ದಾರೆ.

ಮಂಗಳವಾರ ಕಾಲೇಜಿಗೆ ಬೈಕ್ ತರುವ ವಿದ್ಯಾರ್ಥಿಗಳನ್ನು ಕರೆದ ಆರ್ ಡಿ ಜನಾರ್ಧನ್ ಅವರು ದಿಢೀರ್ ಆಗಿ ಎಲ್ಲಾ ವಾಹನಗಳ ದಾಖಲೆ ತಪಾಸಣೆ ಮಾಡಿದರು. ಈ ವೇಳೆ ಕೆಲ ವಿದ್ಯಾರ್ಥಿಗಳಲ್ಲಿ ವಾಹನ ಚಲಾಯಿಸಲು ಪರವಾನಿಗೆ ಇರಲಿಲ್ಲ. ಕೆಲವರ ವಾಹನದ ದಾಖಲೆ ಸರಿಯಾಗಿರಲಿಲ್ಲ. ಕೆಲವರು ಹೆಲ್ಮೆಟ್ ಧರಿಸುತ್ತಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜಿನ ಶಿಸ್ತು ಸಮಿತಿಯ ಸದಸ್ಯ ಶರತ್‌ಕುಮಾರ್, ಮಹಾದೇವಪ್ಪ ಹುಲಕೊಪ್ಪ, ಎಂ. ವಿ. ಗೇರಗದ್ದೆ, ನಿತೇಶ್ ಡಿ. ಮೋರೆ, ಮೊಹಮ್ಮದ್ ಅಸ್ಲಂಖಾನ್ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

`ಇನ್ನು ಮುಂದೆ ಸಂಚಾರಿ ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದರೆ ನಾನೇ ಫೋನ್ ಮಾಡಿ ಪೊಲೀಸರನ್ನು ಕರೆಯಿಸುವೆ. ಬೈಕನ್ನು ಜಪ್ತು ಮಾಡಿ ಸರ್ಕಾರಕ್ಕೆ ಒಪ್ಪಿಸುವೆ’ ಎಂದವರು ವಿದ್ಯಾರ್ಥಿಗಳಿಗೆ ಎಚ್ಚರಿಸಿದರು. ಸಂಚಾರಿ ನಿಯಮ ಉಲ್ಲಂಘನೆಯಿoದ ಆಗುವ ಅಪಘಾತ, ಸಾವು-ನೋವುಗಳ ಬಗ್ಗೆ ಮನವರಿಕೆ ಮಾಡಿದರು. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಂತೆ ಪೊಲೀಸರು ಸೂಚನೆ ನೀಡಿದ ಹಿನ್ನಲೆ ಈ ಕಾರ್ಯಾಚರಣೆ ನಡೆದಿದ್ದು, ವಿಶೇಷವಾಗಿ ವಾಹನ ಪರವಾನಿಗೆ ಇಲ್ಲದವರಿಗೆ ಕಾಲೇಜು ಆವರಣದಲ್ಲಿಯೇ ಪರವಾನಿಗೆ ಕೊಡಿಸುವ ಆಂದೋಲನದ ಚಿಂತನೆ ನಡೆಯಿತು.

ತಕ್ಷಣ ಆರ್‌ಟಿಓ ಕಚೇರಿಗೆ ಕಾಲೇಜಿನಿಂದ ಪತ್ರ ಬರೆಯಲಾಯಿತು. ಕಾಲೇಜು ಮಕ್ಕಳಿಗೆ ವಾಹನ ಪರವಾನಿಗೆ ನೀಡುವುದು ಹಾಗೂ ಜಾಗೃತಿ ಮೂಡಿಸಲು ಅಭಿಯಾನ ನಡೆಸುವಂತೆ ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page