6

ಅಂಕೋಲಾ: ಕನಸಿನ ಯೋಜನೆಗೆ 86 ಕೋಟಿ ರೂ!

ಅಂಕೋಲಾ ತಾಲೂಕು ಪಂಚಾಯತವೂ 2025-26ನೇ ಸಾಲಿನ ಲೆಕ್ಕ ಶೀರ್ಷಿಕೆ ಅಡಿ ಅಭಿವೃದ್ಧಿ ಕೆಲಸಗಳಿಗೆ 86.31 ಕೋಟಿ ರೂ ಆಯವ್ಯಯ ಮಂಡಿಸಿದೆ.

ತಾಪo ನೂತನ ಆಡಳಿತಾಧಿಕಾರಿ ಪ್ರಕಾಶ ಆರ್ ಹಾಲಮ್ಮನವರ ಮಂಗಳವಾರ ಈ ಬಗ್ಗೆ ಮಾಹಿತಿ ನೀಡಿದ್ದು, ಅನುದಾನ ಅಂದಾಜು ಪತ್ರ ಹಂಚಿಕೆ ಮಾಡಿದರು. ಕಳೆದ ಸಾಲಿಗಿಂತ ಈ ಸಲ 1.34 ಕೋಟಿ. ರೂ. ಹೆಚ್ಚಿಗೆ ಅನುದಾನ ಒದಗಿಸಲಾಗಿದೆ. ತಾ ಪಂ. ಕಾರ್ಯಕ್ರಮಗಳನ್ನು ಪ್ರಮುಖವಾಗಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತದೆ.

ಈ ಪೈಕಿ ಸರ್ವ ಶಿಕ್ಷಣ ಇಲಾಖೆಗೆ 3.05 ಕೋಟಿ ರೂ, ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ 52.06 ಕೋಟಿ ರೂ. ಪ್ರೌಢ ಶಿಕ್ಷಣಕ್ಕೆ 14.72 ಕೋಟಿ ರೂ, ಪರಿವೀಕ್ಷಣೆಗೆ 1.57 ಕೋಟಿ ರೂ, ಆರೋಗ್ಯ ಇಲಾಖೆಗೆ 30.11 ಲಕ್ಷ ರೂ, ಸಮಾಜ ಕಲ್ಯಾಣ ಇಲಾಖೆಗೆ 83.11 ಲಕ್ಷ ರೂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 13.72 ಲಕ್ಷ ರೂ, ಕೃಷಿ ಇಲಾಖೆಗೆ 48 ಲಕ್ಷ ರೂ, ಪಶು ಸಂಗೋಪನ ಇಲಾಖೆಗೆ 58.73 ಲಕ್ಷ ರೂ, ಶಿಶು ಅಭಿವೃದ್ಧಿ ಇಲಾಖೆಗೆ 7.22 ಕೋ.ರೂ, ತಾಲೂಕ ಪಂಚಾಯತ ನಿರ್ವಹಣೆಗೆ 5.15 ಕೋಟಿ ರೂ, ನೀರು ಸರಬರಾಜು ಯೋಜನೆಗೆ 2.17 ಲಕ್ಷ ರೂ, ವೈದ್ಯಕೀಯ ವೆಚ್ಚ 15.33 ಲಕ್ಷ ರೂ ಹಂಚಿಕೆ ಮಾಡಲಾಗಿದೆ.

ಈ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದ್ದು, ಬಾಳೆಗುಳಿಯಲ್ಲಿ ತುರ್ತಾಗಿ ಬಸ್ ತಂಗುದಾಣ ನಿರ್ಮಿಸಲು ಸ್ಥಳ ನಿಗದಿಪಡಿಸುವ ವಿಚಾರ ಪ್ರಸ್ತಾಪವಾಯಿತು. ಕಾರವಾರದಿಂದ ಅಂಕೋಲಾಕ್ಕೆ ಆಗಮಿಸುವ ಬಸ್ಸುಗಳು ಬಾಳೆಗುಳಿ ಫ್ಲೈ ಓವರ ಬದಲಿಗೆ ಸರ್ವಿಸ್ ರಸ್ತೆಯ ಮೂಲಕ ಬಂದು ಬಾಳೆಗುಳಿ ಕ್ರಾಸಿನಲ್ಲಿ ಪ್ರಯಾಣಿಕರನ್ನು ಇಳಿಸುವಂತೆಯೂ, ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವೇಳೆಯಲ್ಲಿ ಬಸ್ಸುಗಳು ಸಂಚರಿಸುವAತೆಯೂ ಸಾರಿಗೆ ಅಧಿಕಾರಿಗಳಿಗೆ ಪ್ರಕಾಶ ಆರ್ ಹಾಲಮ್ಮನವರ ಸೂಚಿಸಿದರು. ಸಾಮರ್ಥ್ಯ ಸೌಧದ ಬಳಿ ಇರುವ ಅಪಾಯಕಾರಿ ಮರ ತೆರವುಗೊಳಿಸುವಂತೆ ಹಾಗೂ ಬೀದಿ ನಾಯಿಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಪುರಸಭೆಗೆ ಸೂಚಿಸಿದರು.

ಸಭೆಯಲ್ಲಿ ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page