ಕಾರವಾರ: ಕಿನ್ನರ ಗ್ರಾಮದ ನಿರಾಕಾರ ದೇವಾಲಯದ ಬಳಿ ಗುಡ್ಡ ಕುಸಿದಿದ್ದರಿಂದ ಮಣ್ಣಿನ ಅಡಿಗೆ ಸಿಲುಕಿದ್ದ ತಿರ್ಕಸ್ ಗುರವ್ ಎಂಬಾತ ಸಾವನಪ್ಪಿದ್ದಾನೆ.
ಬೆಳಗ್ಗೆ 7.30ಕ್ಕೆ ಗುಡ್ಡ ಕುಸಿದಿದೆ. ಪರಿಣಾಮ ಅಲ್ಲಿಯೇ ಇದ್ದ ಹಂಚಿನ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಮನೆ ಮಾಲಕ ತಿಕರ್ಸ ಗುರವ್ ಮನೆಯೊಳಗೆ ಸಿಲುಕಿಗೊಂಡಿದ್ದು, ಊರಿನವರು ಅವರ ರಕ್ಷಣೆಗೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಆದರೆ, ಆತ ಬದುಕಲಿಲ್ಲ. ಇದೀಗ ಶವವನ್ನು ಹೊರ ತೆಗೆಯಲಾಗಿದೆ.








