ಅಂಕೋಲಾ: ಶಿರೂರು ಬಳಿ ಮಂಗಳವಾರ ಭಾರೀ ಪ್ರಮಾಣದ ಗುಡ್ಡ ಕುಸಿದ ಕಾರಣ ಮಣ್ಣಿನ ಅಡಿ ಸಿಲುಕಿ 7 ಜನ ಸಾವನಪ್ಪಿದ್ದಾರೆ.
ಹೆದ್ದಾರಿಯಲ್ಲಿ ಚಲಿಸುತ್ತಿದ್ದ ವಾಹನದ ಮೇಲೆ ಗುಡ್ಡ ಕುಸಿದಿದೆ. ಗುಡ್ಡ ಕುಸಿತದ ರಭಸಕ್ಕೆ ಹೆದ್ದಾರಿ ಅಂಚಿನಲ್ಲಿ ನಿಂತಿದ್ದ ಟ್ಯಾಂಕರ್ ಸಹ ನದಿ ಪಾಲಾಗಿದೆ. ಕೆಲವರ ಪ್ರಕಾರ ಮೃತರ ಕುಟುಂಬದವರು ಅಲ್ಲಿ ಅಂಗಡಿ ನಡೆಸುತ್ತಿದ್ದರು. ಇನ್ನು ಕೆಲವರು ಅವರು ಗುಡ್ಡದ ತಪ್ಪಲಿನಲ್ಲಿ ಸ್ನಾನ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಮೃತರಲ್ಲಿ ಶಾಂತಾ ಎಂಬಾತರ ಶವ ನದಿ ಪಕ್ಕ ದೊರೆತಿದೆ. ಲಕ್ಷಣ ನಾಯ್ಕ (47), ಶಾಂತಿ ನಾಯ್ಕ (36), ರೋಷನ್ (11) ಅವಂತಿಕಾ (6), ಜಗನ್ನಾಥ (55) ಸಾವನಪ್ಪಿದವರಾಗಿದ್ದು , ಟ್ಯಾಂಕರ್ ಚಾಲಕ ಸೇರಿ ಮತ್ತೊಬ್ಬ ಸಹ ಮಣ್ಣಿನಡಿ ಉಸಿರುಗಟ್ಟಿ ಸಾವನಪ್ಪಿದ್ದಾನೆ. ನಾಪತ್ತೆಯಾದ ಇನ್ನು ಇಬ್ಬರಿಗಾಗಿ ಹುಡುಕಾಟ ನಡೆದಿದೆ.








