ಜೊಯಿಡಾ ಹಾಗೂ ದಾಂಡೇಲಿಯಲ್ಲಿ ಜೂಜಾಡುತ್ತಿದ್ದವರ ಮೇಲೆ ಪೊಲೀಸ್ ದಾಳಿ ಮುಂದುವರೆದಿದೆ.
ಜುಲೈ 17ರಂದು ಸಂಜೆ ಪಿಸೈ ಶಶಿಕಾಂತ್ ಪಾಟೀಲ್, ರಾಮನಗರದ ರೈಲು ನಿಲ್ದಾಣದ ಬಳಿ ಓಸಿ ಆಡಿಸುತ್ತಿದ್ದ ತಿನೈಘಾಟ್’ನ ರೋಮನ್ ಶಾವರ್ ಡೆಲಿಮಾ ಎಂಬಾತನನ್ನು ಬಂಧಿಸಿದ್ದಾರೆ.. ಆತ ಸಂಗ್ರಹಿಸಿದ್ದ 550ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಆತ ಸಂಗ್ರಹಿಸಿದ ಹಣ ಪಡೆದು ಕಮಿಷನ್ ಕೊಡುತ್ತಿದ್ದ ದಾಂಡೇಲಿಯ ಮುಸ್ತಾಕ ಮಿಶ್ರಿಕೋಟಿ ಎಂಬಾತನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.








